ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 15, 2023

Published 15 ಮೇ 2023, 13:41 IST
Last Updated 15 ಮೇ 2023, 13:41 IST
ಅಕ್ಷರ ಗಾತ್ರ
Introduction

ಕಾಂಗ್ರೆಸ್‌ನಲ್ಲಿ ಮುಂದುವರಿದ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು, ಉಪರಾಷ್ಟ್ರಪತಿ ಹಾಗೂ ಕೇಂದ್ರ ಕಾನೂನು ಸಚಿವರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ, ಮೋಚಾ ಚಂಡಮಾರುತದಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ... ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

1

ಕಾಂಗ್ರೆಸ್‌ನಲ್ಲಿ ಬಗೆಹರಿಯದ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ –ಪ್ರಜಾವಾಣಿ ಚಿತ್ರ/ ರಂಜು ಪಿ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದ್ದು, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.

ಭಾನುವಾರ ರಾತ್ರಿ ನಡೆದ ಶಾಸಕಾಂಕಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ದೆಹಲಿಯಿಂದ ಆಗಮಿಸಿದ್ದ ವೀಕ್ಷಕರು ಅದನ್ನು ಹೈಮಾಂಡ್‌ಗೆ ಸಲ್ಲಿಸಿದ್ದಾರೆ. ಇದರ ಆಧಾರದಲ್ಲಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಗಿಪಟ್ಟು : ‘ಕೈ’ ಹೈಕಮಾಂಡ್‌ಗೆ ತಲೆನೋವಾದ ‘ನಾಯಕ’ನ ಆಯ್ಕೆ

2

ಬೆಂಬಲಕ್ಕೆ ಸಂಖ್ಯಾಬಲವಿಲ್ಲ, ಪಕ್ಷ ಗೆದ್ದಿರುವ 135 ಶಾಸಕರ ಸಂಖ್ಯೆ ನನ್ನದು: ಡಿಕೆಶಿ

ಬೆಂಗಳೂರು: ‘ನನ್ನ ವೈಯಕ್ತಿಕ ಬೆಂಬಲಕ್ಕೆ ಹೆಚ್ಚಿನ ಶಾಸಕರ ಸಂಖ್ಯಾಬಲ ಇಲ್ಲದಿರಬಹುದು. ಆದರೆ, ಪಕ್ಷ ಗೆದ್ದಿರುವ 135 ಶಾಸಕರ ಸಂಖ್ಯೆ ನನ್ನ ಸಂಖ್ಯೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಚರ್ಚಿಸಲು ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ದೆಹಲಿಗೆ ಹೊರಡುವ ಮೊದಲು ಕುಟುಂಬ ಸದಸ್ಯರ ಜತೆ ಶಿವಕುಮಾರ್‌ ತುಮಕೂರು ಜಿಲ್ಲೆ ತಿಪಟೂರಿನ ನೊಣವಿನಕೆರೆ ಸೋಮೆಕಟ್ಟೆಯ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ತಮ್ಮ ಗುರು ಅಜ್ಜಯ್ಯನ ಆಶೀರ್ವಾದ ಪಡೆದರು.

ಅದಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿ ಆಯ್ಕೆ ನನ್ನನ್ನು ಮಾಡಿದಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಭರವಸೆ ನೀಡಿದ್ದೆ. ಕೊಟ್ಟ ಮಾತನ್ನು ಈಡೇರಿಸಿದ್ದೇನೆ’ ಎಂದರು.

ಪೂರ್ತಿ ಓದಿ: ಬೆಂಬಲಕ್ಕೆ ಸಂಖ್ಯಾಬಲವಿಲ್ಲ, ಪಕ್ಷ ಗೆದ್ದಿರುವ 135 ಶಾಸಕರ ಸಂಖ್ಯೆ ನನ್ನದು: ಡಿಕೆಶಿ

3

ರಾತ್ರಿ ಖರ್ಗೆಗೆ ವರದಿ, ಶೀಘ್ರವೇ ಸರ್ಕಾರ ರಚನೆ: ರಣದೀಪ್‌ ಸಿಂಗ್‌ ಸುರ್ಜೇವಾಲ

ನವದೆಹಲಿ: ಶೀಘ್ರವೇ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀಕ್ಷಕರು ಇಂದು ರಾತ್ರಿಯ ಒಳಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಶೀಘ್ರವೇ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲಿದ್ದೇವೆ‘ ಎಂದು ಹೇಳಿದರು.

ಪೂರ್ತಿ ಓದಿ: ರಾತ್ರಿ ಖರ್ಗೆಗೆ ವರದಿ, ಶೀಘ್ರವೇ ಸರ್ಕಾರ ರಚನೆ: ರಣದೀಪ್‌ ಸಿಂಗ್‌ ಸುರ್ಜೇವಾಲ

4

71 ಸಾವಿರ ಜನರಿಗೆ ‘ನೇಮಕಾತಿ’ ಪತ್ರ ವಿತರಣೆ ಮಾಡಲಿರುವ ಪ್ರಧಾನಿ

ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿರುವ 71 ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಂದು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಜೊತೆಗೆ, ಈ ಎಲ್ಲರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಲಿದ್ದಾರೆ.

ದೇಶದ 45 ವಿವಿಧ ಸ್ಥಳಗಳಲ್ಲಿ ಈ ‘ಉದ್ಯೋಗ ಮೇಳ’ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶಗಳು, ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳಲ್ಲಿ ಕೆಲವಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

5

ನ್ಯಾಯಾಂಗ ವಿರುದ್ಧ ಟೀಕೆ: ಧನಕರ್, ರಿಜಿಜು ವಿರುದ್ಧ ಅರ್ಜಿ ತಳ್ಳಿ ಹಾಕಿದ ‘ಸುಪ್ರೀಂ‘

ನವದೆಹಲಿ: ನ್ಯಾಯಾಂಗ ಹಾಗೂ ಕೊಲಿಜಿಯಂ ವ್ಯವಸ್ಥೆಯನ್ನು ಟೀಕೆ ಮಾಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಕಾನೂನು ಸಚಿವ ಕಿರಣ್‌ ರಿಜಿಜು ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಳ್ಳಿ ಹಾಕಿದೆ.

ಈ ಅರ್ಜಿಯನ್ನು ಈ ಹಿಂದೆ ಬಾಂಬೆ ಹೈಕೋರ್ಟ್‌ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನೆ ಮಾಡಿ ಬಾಂಬೆ ವಕೀಲ ಒಕ್ಕೂಟ ಸುಪ್ರಿಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಪೂರ್ತಿ ಓದಿ: ನ್ಯಾಯಾಂಗ ವಿರುದ್ಧ ಟೀಕೆ: ಧನಕರ್, ರಿಜಿಜು ವಿರುದ್ಧ ಅರ್ಜಿ ತಳ್ಳಿ ಹಾಕಿದ ‘ಸುಪ್ರೀಂ‘

6

ಮಣಿಪುರ ಹಿಂಸಾಚಾರ | 5,822 ಮಂದಿ ಮಿಜೋರಾಂಗೆ ಪಲಾಯನ

ಐಜ್ವಾಲ್‌: ಗಲಭೆಪೀಡಿತ ಮಣಿಪುರದಿಂದ 5,822 ಮಂದಿ ಮಿಜೋರಾಂಗೆ ಪಲಾಯನ ಮಾಡಿದ್ದು, ಅಲ್ಲಿನ ವಿವಿಧ ಜಿಲ್ಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಚಿನ್– ಕುಕಿ– ಮಿಜೋ ಸಮುದಾಯಕ್ಕೆ ಸೇರಿರುವ ಈ ಜನರು ಮಿಜೋರಾಂನ ಆರು ಜಿಲ್ಲೆಗಳಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದೂ ವಿವರಿಸಿದ್ದಾರೆ.


ಪೂರ್ತಿ ಓದಿ: ಮಣಿಪುರ ಹಿಂಸಾಚಾರ | 5,822 ಮಂದಿ ಮಿಜೋರಾಂಗೆ ಪಲಾಯನ

7

ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

ನವದೆಹಲಿ: ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ ‘ಮೇರಿ ಲೈಫ್‌’ (ನನ್ನ ಬದುಕು) ಮೊಬೈಲ್‌ ಆ್ಯಪ್‌ ಅನಾವರಣಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ‘ಮಿಷನ್‌ ಲೈಫ್‌’ ಆ್ಯಪ್‌ನಿಂದ ಪ್ರೇರಣೆಗೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೇರಿ ಲೈಫ್‌ನಲ್ಲಿನ ‘ಲೈಫ್‌’ ಎಂಬ ಪದವು ಪರಿಸರಕ್ಕಾಗಿ ಜೀವನಶೈಲಿ ಎಂಬ ಅರ್ಥವನ್ನು ಕೊಡುತ್ತದೆ. 

ಪೂರ್ತಿ ಓದಿ: ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

8

ರುಪೇ ಕಾರ್ಡ್‌ | ಸಿವಿವಿ ಇಲ್ಲದೆ ವಹಿವಾಟಿಗೆ ಅವಕಾಶ

ನವದೆಹಲಿ: ಕಾರ್ಡ್‌ ಟೋಕನೈಸೇಷನ್‌ ವ್ಯವಸ್ಥೆ ಆಯ್ಕೆ ಮಾಡಿಕೊಂಡಿರುವ ರುಪೇ ಕಾರ್ಡ್‌ ಹೊಂದಿರುವ ಗ್ರಾಹಕರು ‘ಸಿವಿವಿ’ ಇಲ್ಲದೇ ವಹಿವಾಟು ನಡೆಸಬಹುದು ಎಂದು ರಾಷ್ಟ್ರೀಯ ಪಾವತಿಗಳ ನಿಗಮವು (ಎನ್‌ಪಿಸಿಐ) ಸೋಮವಾರ ಹೇಳಿದೆ.

ಪಾವತಿ ವೇಳೆ ‘ಸಿವಿವಿ’ ನಮೂದಿಸುವ ಅಗತ್ಯ ಇಲ್ಲದೇ ಇರುವುದರಿಂದ ಗ್ರಾಹಕರು ತಮ್ಮ ಬಳಿಯಲ್ಲಿ ಕಾರ್ಡ್‌ ಇಟ್ಟುಕೊಂಡಿರುವ ಅಥವಾ ಕಾರ್ಡ್‌ನ ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪೂರ್ತಿ ಓದಿ: ರುಪೇ ಕಾರ್ಡ್‌ | ಸಿವಿವಿ ಇಲ್ಲದೆ ವಹಿವಾಟಿಗೆ ಅವಕಾಶ

9

ಮೋಕಾ ಚಂಡಮಾರುತ | ಜನವಸತಿ ಪ್ರದೇಶಗಳಿಗೆ ನುಗ್ಗಿದ ಉಪ್ಪು ನೀರು

ಢಾಕಾ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ‘ಮೋಕಾ’ ಚಂಡಮಾರುತ ಮ್ಯಾನ್ಮಾರ್‌ನ ಪಶ್ಚಿಮ ಭಾಗದ ಕರಾವಳಿ ಪ್ರದೇಶವನ್ನು ಅಪ್ಪಳಿಸಿದ್ದು, ಜನವಸತಿ ಪ್ರದೇಶಕ್ಕೆ ಅಪಾರ ಪ್ರಮಾಣದಲ್ಲಿ ನುಗ್ಗಿರುವ ಸಮುದ್ರ ನೀರಿನಲ್ಲಿ ಸಾವಿರಾರು ಮಂದಿ ಸಿಲುಕಿದ್ದಾರೆ. 


ಚಂಡಮಾರುತದಿಂದ ಸಂಭವಿಸಿದ ಹಲವು ಅನಾಹುತಗಳಿಗೆ ಸಿಲುಕಿ ಆರು ಮಂದಿ ಮೃತಪಟ್ಟಿದ್ದು, 700 ಮಂದಿ ಗಾಯಗೊಂಡಿದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಮಂದಿ ಶಾಲೆ, ಪಗೋಡಾಗ, ಬೌದ್ಧ ಧರ್ಮಛತ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.


ಪೂರ್ತಿ ಓದಿ: ಮೋಕಾ ಚಂಡಮಾರುತ | ಜನವಸತಿ ಪ್ರದೇಶಗಳಿಗೆ ನುಗ್ಗಿದ ಉಪ್ಪು ನೀರು