ತಿರುವನಂತಪುರ: ‘ರಾಜ್ಯಗಳ ಬೇಡಿಕೆಗಳು ಹಾಗೂ ಕಾಳಜಿಗಳ ಕುರಿತು ಗಮನಹರಿಸುವಂತೆ 16ನೇ ಹಣಕಾಸು ಆಯೋಗದ ಮೇಲೆ ಒತ್ತಡ ಹೇರುವುದಕ್ಕಾಗಿ ಕನಿಷ್ಠ 9 ರಾಜ್ಯಗಳ ಸಚಿವರ ಸಭೆ ಆಯೋಜಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುರುವಾರ ಹೇಳಿದ್ದಾರೆ.
ಇಲ್ಲಿ ನಡೆದ ಐದು ರಾಜ್ಯಗಳ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಸಚಿವರನ್ನು ಕೋರಲಾಗಿದೆ’ ಎಂದರು.