ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು...

ಪಿರಿಯಾಪಟ್ಟಣ ( ಮೈಸೂರು ಜಿಲ್ಲೆ): ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಜಯ ಸಿಕ್ಕಿದ್ದು, ಹತ್ತು ದಿನದೊಳಗೆ ಕೇಂದ್ರಕ್ಕೆ ಯೋಜನೆಯ ಡಿಪಿಆರ್ ಸಲ್ಲಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
.ಹತ್ತು ದಿನದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್: ಡಿ.ಕೆ. ಶಿವಕುಮಾರ್.
ಪಿರಿಯಾಪಟ್ಟಣ ( ಮೈಸೂರು ಜಿಲ್ಲೆ): 'ವಿಪಕ್ಷಗಳ ಅನಗತ್ಯ ಟೀಕೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೇ ಉತ್ತರ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
.ವಿಪಕ್ಷಗಳ ಟೀಕೆಗೆ ಅಭಿವೃದ್ಧಿಯೇ ಉತ್ತರ: ಮುಖ್ಯಮಂತ್ರಿ ಸಿದ್ದರಾಮಯ್ಯ.
ಟೆಹರಾನ್: ಅಮೆರಿಕದೊಂದಿಗೆ ಸಂಧಾನ ಮಾತುಕತೆ ನಡೆಸಲು ಇರಾನ್ನಿಂದ ಯಾವುದೇ ನಿಯೋಗವು ಪಾಕಿಸ್ತಾನಕ್ಕೆ ಹೊರಟಿಲ್ಲ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
.ಇರಾನ್ನಿಂದ ಪಾಕಿಸ್ತಾನಕ್ಕೆ ಯಾವುದೇ ನಿಯೋಗ ಹೊರಟಿಲ್ಲ: ಸರ್ಕಾರಿ ಮಾಧ್ಯಮ.
ನವದೆಹಲಿ: ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಜೋಡಿಸುವ ಮೂಲಕ ಮೀಸಲಾತಿಯನ್ನು ವಿಳಂಬಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ಮಂಗಳವಾರ ಕಾಂಗ್ರೆಸ್ ಆರೋಪಿಸಿದೆ.
.ಮಹಿಳಾ ಮೀಸಲಾತಿ: ಪ್ರಧಾನಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ; ರಾಹುಲ್ ಪತ್ರದ ನೆನಪು.
ಸ್ಯಾನ್ ಫ್ರಾನ್ಸಿಸ್ಕೋ: ಆ್ಯಪಲ್ ಕಂಪನಿಯ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಟಿಮ್ ಕುಕ್ ಸೋಮವಾರ ಘೋಷಿಸಿದ್ದಾರೆ. ಸುಮಾರು 15 ವರ್ಷ ಆ್ಯಪಲ್ ಸಂಸ್ಥೆಯನ್ನು ಕುಕ್ ಮುನ್ನಡೆಸಿದ್ದಾರೆ.
.ಆ್ಯಪಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಟಿಮ್ ಕುಕ್.
ಮೈಸೂರು: ' ದಾವಣಗೆರೆ ಉಪಚುನಾವಣೆ ಫಲಿತಾಂಶದ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಆಗಬಹುದು' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
.ಫಲಿತಾಂಶದ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್: ಸಚಿವ ಸತೀಶ ಜಾರಕಿಹೊಳಿ.
ಸಿಡ್ನಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಅಸ್ಥಿರ ಕದನ ವಿರಾಮ ಜಾರಿಯಲ್ಲಿದ್ದರೂ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಹಾಗಾದರೆ ಈ ಸಂಘರ್ಷ ಎತ್ತ ಸಾಗುತ್ತಿದೆ? ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದರೆ ಇದು ಶೀತಲ ಸಂಘರ್ಷದತ್ತ (frozen conflict) ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
.ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧ; ಶೀತಲ ಸಂಘರ್ಷದತ್ತ ಸಾಗಲು 3 ಕಾರಣಗಳು.
ಪಟ್ನಾ(ಬಿಹಾರ): ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಮಹಿಳೆಯರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ.
.ನಾಯಕರ ಕೋಣೆಗೆ ಹೋಗದಿದ್ದರೆ ಮಹಿಳೆಯರಿಗೆ ರಾಜಕೀಯ ಪ್ರವೇಶ ಅಸಾಧ್ಯ: ಪಪ್ಪು ಯಾದವ್.
ಆ್ಯಪಲ್ ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಟಿಮ್ ಕುಕ್ ಘೋಷಿಸಿದ್ದಾರೆ. ಟಿಮ್ ಕುಕ್ ಸುಮಾರು 15 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಟಿಮ್ ಕುಕ್ ಮುಂದಾಳತ್ವದಲ್ಲಿ ಆ್ಯಪಲ್ ಗಮನಾರ್ಹ ಹಾಗೂ ಮಹತ್ತರವಾದ ಬದಲಾವಣೆಗಳನ್ನು ಕಂಡಿತ್ತು. ಆರ್ಥಿಕ ವೃದ್ಧಿ, ಕಾರ್ಯಾಚರಣೆಯ ನಿಖರತೆ ಮತ್ತು ದೀರ್ಘಾವಧಿಯ ಆದಾಯ ಗಳಿಕೆಯನ್ನು ಕಂಡಿತ್ತು.
.ಟಿಮ್ ಕುಕ್ ಮುಂದಾಳತ್ವದಲ್ಲಿ ಗಮನಾರ್ಹ ಸಾಧನೆ ಕಂಡ ಆ್ಯಪಲ್.
ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಸಾಧನೆ ತೋರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಗದೊಂದು ಹೊಡೆತ ಬಿದ್ದಿದೆ. ತಂಡದ ಯುವ ಪ್ರತಿಭಾವಂತ ಬ್ಯಾಟರ್ ಆಯುಷ್ ಮ್ಹಾತ್ರೆ ಗಾಯದಿಂದಾಗಿ ಟೂರ್ನಿಯ ಉಳಿದಿರುವ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
.ಚೆನ್ನೈ ಗಾಯದ ಮೇಲೆ ಬರೆ; ಯುವ ಪ್ರತಿಭಾವಂತ ಆಟಗಾರ ಆಯುಷ್ ಟೂರ್ನಿಯಿಂದಲೇ ನಿರ್ಗಮನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.