ಅತೀ ವೇಗದ ಚಾಲನೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಿಂದ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷದ ಮೂರು ತಿಂಗಳಲ್ಲಿ 11,265 ಅಪಘಾತಗಳು ಸಂಭವಿಸಿ 2,917 ಮಂದಿ ಮೃತಪಟ್ಟಿದ್ದಾರೆ. ದಿನಕ್ಕೆ ಸರಾಸರಿ 32 ಮಂದಿ ಜೀವ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಅಲ್ಲದೇ ಇತರೆ ರಸ್ತೆಗಳಲ್ಲಿ 2026ರ ಜನವರಿಯಿಂದ ಮಾರ್ಚ್ವರೆಗೆ ಸಂಭವಿಸಿದ ಅಪಘಾತಗಳ ಅಂಕಿ–ಅಂಶಗಳನ್ನು ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್ಸಿಆರ್ಬಿ) ಬಿಡುಗಡೆಗೊಳಿಸಿದೆ.
.ರಾಜ್ಯದಲ್ಲಿ 2026ರ ಮೂರೇ ತಿಂಗಳಲ್ಲಿ 11,265 ಅಪಘಾತ: ನಿತ್ಯ ಸರಾಸರಿ 32 ಸಾವು.
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...

‘ನೀಟ್–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ, ‘ನೀಟ್’ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದ ಭಾಗವಾಗಿದ್ದ ಸಸ್ಯವಿಜ್ಞಾನ ಉಪನ್ಯಾಸಕಿಯನ್ನು ಶನಿವಾರ ಬಂಧಿಸಿದೆ.

ಪುಣೆ ಮೂಲದ ಮನಿಶಾ ಮಂಧಾರೆ ಬಂಧಿತ ಉಪನ್ಯಾಸಕಿ. ದೆಹಲಿಯಲ್ಲಿ ಅವರನ್ನು ಬಂಧಿಸಿದ ಸಿಬಿಐ ತನ್ನ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದೆ. ಉಪನ್ಯಾಸಕಿಯು ಈ ಪ್ರಕರಣದ ಮತ್ತೊಬ್ಬ ಪ್ರಮುಖ ಸಂಚುಕೋರಾಗಿದ್ದಾರೆ ಎಂದು ಸಿಬಿಐ ಹೇಳಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸಿಬಿಐ ಬಂಧಿಸಿದ 9ನೇ ಆರೋಪಿ ಇವರಾಗಿದ್ದಾರೆ.
.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಉಪನ್ಯಾಸಕಿ ಬಂಧನ.
ಭಾರತವನ್ನು ‘ಅವಕಾಶಗಳ ನಾಡು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಮಹತ್ವಾಕಾಂಕ್ಷೆಯು ಇನ್ನು ಮುಂದೆ ಅದರ ಗಡಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ’ ಎಂದು ಹೇಳಿದರು.

ನೆದರ್ಲೆಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ಅವರು ಹೇಗ್ನಲ್ಲಿ ಶನಿವಾರ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದರು. ಭಾರತದ ಜತೆಗಿನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವಂತೆ ನೆದರ್ಲೆಂಡ್ಸ್ನಲ್ಲಿರುವ ‘ಭಾರತದ ಸ್ನೇಹಿತರಿ’ಗೆ ಕರೆ ನೀಡಿದರು.
.ಭಾರತದ ಮಹತ್ವಾಕಾಂಕ್ಷೆ ಸೀಮಾತೀತ: ಮೋದಿ.
ರಾಜ್ಯದಲ್ಲಿ ಶಾಲೆಗಳು ಜೂನ್ 1ರಿಂದ ಆರಂಭವಾಗಲಿದ್ದು, ಅಂದೇ ಪೋಷಕ-ಶಿಕ್ಷಕರ ಮಹಾ ಸಭೆಯನ್ನೂ ಆಯೋಜಿಸಲಾಗುತ್ತಿದೆ.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 2026–27ನೇ ಸಾಲಿನ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಜತೆ ಶನಿವಾರ ಸಂವಾದ ನಡೆಸಿದರು.
.ರಾಜ್ಯದಲ್ಲಿ ಜೂನ್ 1ಕ್ಕೆ ಶಾಲಾ ಪ್ರಾರಂಭೋತ್ಸವ.
ಕಾಂಗೊ ಮತ್ತು ಉಗಾಂಡಾ ದೇಶಗಳಲ್ಲಿ ಎಬೊಲಾ ವೈರಸ್ ಹರಡುವಿಕೆ ವಿಪರೀತ ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ‘ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಘೋಷಿಸಿದೆ.

ಕಾಂಗೊದ ಇಟುರಿ ಪ್ರಾಂತ್ಯದ ಬುನಿಯಾ, ವ್ಯಾಂಪರಾ ಮತ್ತು ಮೊಂಗದವಾಲು ಸೇರಿದಂತೆ ಕನಿಷ್ಠ ಮೂರು ಆರೋಗ್ಯ ವಲಯಗಳಲ್ಲಿ ಶನಿವಾರದ ವೇಳೆಗೆ 80 ಶಂಕಿತ ಸಾವು, ಎಂಟು ಮಂದಿಗೆ ಎಬೊಲಾ ದೃಢಪಟ್ಟಿದೆ.
.ಎಬೊಲಾದಿಂದ 80 ಸಾವು?: ಕಾಂಗೊ, ಉಂಗಾಡಾದಲ್ಲಿ ಆರೋಗ್ಯ ತುರ್ತು ಸ್ಥಿತಿ ಘೋಷಣೆ.
ಕೇಂದ್ರ ಚುನಾವಣಾ ಆಯೋಗ ಜೂನ್ 20 ರಿಂದ ಕರ್ನಾಟಕದಲ್ಲಿ ಆರಂಭಿಸುತ್ತಿರುವ ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಎಂಟು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ಪತ್ರ ಬರೆದಿದೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಪತ್ರ ಬರೆದಿದ್ದಾರೆ.
.ಎಸ್ಐಆರ್: ಚುನಾವಣಾಧಿಕಾರಿಗೆ ಕೆಪಿಸಿಸಿ ಪತ್ರ.
ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಮೇಲೆ ಸುಂಕವಿಧಿಸುವ ನೂತನ ಅಬಕಾರಿ ಸುಂಕ ನೀತಿಯು ಮೇ 11ರಿಂದ ಜಾರಿಗೆ ಬಂದಿದ್ದು, ಆಲ್ಕೋಹಾಲ್ ಪ್ರಮಾಣ ಹೆಚ್ಚುಇರುವ ಎಲ್ಲ ಮದ್ಯಗಳ ಮಾರಾಟ ಬೆಲೆ ಏರಿಕೆಯಾಗಿದೆ. ಹೆಚ್ಚಳಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನೂತನ ಸುಂಕ ನೀತಿಯಿಂದ ಕಡಿಮೆ ಬೆಲೆಯ ಮದ್ಯಗಳ ದರ ಅತಿಹೆಚ್ಚು ಏರಿಕೆಯಾಗಿದೆ. ಈ ಮೊದಲು 180 ಎಂ.ಎಲ್ನ (ಕ್ವಾರ್ಟರ್) ವಿಸ್ಕಿಯ ಟೆಟ್ರಾಪ್ಯಾಕ್ನ ಬೆಲೆ ₹70 ಇದ್ದದ್ದು, ₹95–₹98ರವರೆಗೆ ಏರಿಕೆಯಾಗಿದೆ. ಅದೇ ರೀತಿ ₹135ಕ್ಕೆ ಸಿಗುತ್ತಿದ್ದ ಕ್ವಾರ್ಟರ್ ವಿಸ್ಕಿಗೆ ಈಗ ₹160 ನೀಡಬೇಕಾಗಿದೆ.
.ಆಲ್ಕೋಹಾಲ್ ಹೆಚ್ಚಿರುವ ಮದ್ಯದ ಬೆಲೆ ಏರಿಕೆ: ಬಿಯರ್ ಪ್ರಿಯರಿಗೆ ಖುಷಿ.
‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಅದು ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದಲ್ಲಿ ಉಳಿಯಬೇಕೆ? ಬೇಡವೇ ಎಂಬುದನ್ನು ನಿರ್ಧರಿಸಲಿದ್ದೇವೆ’ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಮಾಣಿಕ್ಶಾ ಕೇಂದ್ರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಂದೇಶ ನೀಡಿದ್ದಾರೆ.
.ಪಾಕಿಸ್ತಾನ ಇತಿಹಾಸ ಸೇರಬೇಕೇ? ದ್ವಿವೇದಿ ಪ್ರಶ್ನೆ.
ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಸತತ ಮನವೊಲಿಕೆ ನಂತರ, ಗೃಹ ಸಚಿವರಾಗಿ ಸಂಪುಟ ಸೇರಲು ರಮೇಶ್ ಚೆನ್ನಿತ್ತಲ ಒಪ್ಪಿಕೊಂಡಿದ್ದಾರೆ.
.ಕೇರಳಂ: ಮುನಿಸು ಮರೆತ ಚೆನ್ನಿತ್ತಲಗೆ ಸತೀಶನ್ ಸಂಪುಟದಲ್ಲಿ ಗೃಹ ಖಾತೆ.
ಸತತ ಸೋಲುಗಳ ಸುಳಿಯಲ್ಲಿ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡದ ಗಾಯದ ಮೇಲೆ ಬರೆ ಎಳೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧವಾಗಿದೆ.

ಭಾನುವಾರ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯ ಲಿರುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗ ಲಿವೆ. ರಾಯಪುರದಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ದೌಲ್ಧಾರಾ ವಲಯದ ಪರ್ವತಶ್ರೇಣಿಗಳ ಮಧ್ಯೆ ಇರುವ ಈ ಕ್ರೀಡಾಂಗಣದಲ್ಲಿ ಕೊಹ್ಲಿ ಬ್ಯಾಟಿಂಗ್ ರಂಗೇರುವ ನಿರೀಕ್ಷೆ ಇದೆ.
.IPL 2026: ಆರ್ಸಿಬಿಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಛಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.