ದೇಶ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ....

ಬೆಂಗಳೂರು: ತಮ್ಮ ಪತ್ನಿಯ ಆರೋಗ್ಯದಲ್ಲಿ ಏರಪೇರು ಉಂಟಾಗಿರುವ ಕಾರಣ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬುಧವಾರ ತಡ ರಾತ್ರಿ ದಿಢೀರ್ ಆಗಿ ಇಂದೋರ್ ತೆರಳಿದ್ದಾರೆ. ಅವರ ಮರಳಿ ಬರುವ ಸಮಯ ನಿಗದಿ ಆಗಿಲ್ಲ ಎಂದು ಲೋಕಭವನದ ಮೂಲಗಳು ತಿಳಿಸಿವೆ.
.ಪತ್ನಿಗೆ ಅನಾರೋಗ್ಯ, ಇಂದೋರ್ಗೆ ರಾಜ್ಯಪಾಲ: ಲೋಕಭವನಕ್ಕೆ ತೆರಳಿ ಸಿಎಂ ರಾಜೀನಾಮೆ?.
ಬೆಂಗಳೂರು: ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಕ್ಕಿಯಾಗಿದ್ದರೂ, ಉತ್ತರಾಧಿಕಾರಿ ಆಯ್ಕೆ ಕಗ್ಗಂಟಾಗುವ ಬೆಳವಣಿಗೆಗಳು ಬುಧವಾರ ನಡೆದಿವೆ. ತಮ್ಮ ನಾಯಕನನ್ನು ಭೇಟಿ ಮಾಡಿದ ಆಪ್ತಬಣದ ಸಚಿವರು ಹಾಗೂ ಶಾಸಕರ ದಂಡು ಇಂತಹದೊಂದು ಪಟ್ಟು ಹಾಕುವ ಬಗ್ಗೆ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿದೆ.
.ಸಿಎಂ ಬದಲಾವಣೆ: ಬಲಾಬಲಕ್ಕೆ ಪಟ್ಟು, ಉತ್ತರಾಧಿಕಾರಿ ಆಯ್ಕೆ ಕಗ್ಗಂಟು?.
ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಕಾವೇರಿ ನಿವಾಸದ ಬಳಿ ಅವರ ಅಭಿಮಾನಿಗಳು ಬೆಳಗ್ಗಿನಿಂದಲೇ ಸೇರತೊಡಗಿದರು. ಹೈಕಮಾಂಡ್ ನಾಯಕರ ಜತೆಗೆ ಮಂಗಳವಾರದ ಭೇಟಿಯ ನಂತರ ಸಿದ್ದರಾಮಯ್ಯ ಅವರು ಮೌನಕ್ಕೆ ಜಾರಿದರು.
.ಕಾವೇರಿ ನಿವಾಸದ ಬಳಿ ಅಭಿಮಾನಿಗಳ ಜಮೆ: ಕಣ್ಣೀರಿಟ್ಟ ಸಿಎಂ ಕಚೇರಿಯ ಸಿಬ್ಬಂದಿ.
ಬೆಂಗಳೂರು: ಹಿಂದುಳಿದ ವರ್ಗಗಳಿಗೆ (ಒಬಿಸಿ) ಈಗ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ 32ರಿಂದ ಶೇ 42ಕ್ಕೆ ಹೆಚ್ಚಳ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿದೆ.
.ಜಾತಿ ಸಮೀಕ್ಷೆ ವರದಿ ಸಲ್ಲಿಕೆ: ಒಬಿಸಿ ಮೀಸಲು ಶೇ 42ಕ್ಕೆ ಹೆಚ್ಚಿಸಲು ಶಿಫಾರಸು.
ನವದೆಹಲಿ: ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್ಐಆರ್) ನಡೆಸುವುದಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಅಧಿಕಾರ ಹೊಂದಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.
.SIRಗೆ ಸುಪ್ರೀಂ ಕೋರ್ಟ್ ಬಲ: ಚುನಾವಣಾ ಆಯೋಗದ ಅಧಿಕಾರ ಎತ್ತಿ ಹಿಡಿದು ತೀರ್ಪು.
ಬೆಂಗಳೂರು: ‘ಉಗಾಂಡದಿಂದ ಇಲ್ಲಿಗೆ ಬಂದಿದ್ದ 28 ವರ್ಷದ ಮಹಿಳೆ ಎಬೋಲಾ ಸೋಂಕಿತರಾಗಿಲ್ಲ ಎನ್ನುವುದು ಪ್ರಯೋಗಾಲಯದ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
.ಉಗಾಂಡದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಗೆ ಎಬೋಲಾ ಸೋಂಕಿಲ್ಲ: ದಿನೇಶ್.
ಕಲಬುರಗಿ: ಕಲ್ಯಾಣ ಕರ್ನಾಟಕದ ಬಹುತೇಕ ಕಡೆ ಬುಧವಾರ ಮುಂಜಾನೆ ‘ರೋಹಿಣಿ’ ಮಳೆಯ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಸಿಡಿಲು ಬಡಿದು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
.ರಾಜ್ಯದಲ್ಲಿ ಸಿಡಿಲು ಬಡಿದು 3 ಸಾವು: ಕಲ್ಯಾಣದಲ್ಲಿ ‘ರೋಹಿಣಿ’ ಅಬ್ಬರ.
ಟೆಹರಾನ್: ‘ಆದಷ್ಟು ಬೇಗ ಕದನ ವಿರಾಮದ ಕೆಲಸ ಮುಗಿಸಿ’ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ದಕ್ಷಿಣ ಇರಾನ್ನಲ್ಲಿ ಗುರುವಾರ ಅಮೆರಿಕ ದಾಳಿ ನಡೆಸಿದೆ. ಗುರುವಾರ ಮುಂಜಾನೆ ಕರಾವಳಿ ನಗರಿ ಬಂದರ್ ಅಬ್ಬಾಸ್ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ‘ಹೊರ್ಮುಜ್ ಜಲಸಂಧಿಗೆ ಬೆದರಿಕೆ ಒಡ್ಡಲು ಯತ್ನಿಸುತ್ತಿದ್ದ ಇರಾನ್ನ ನಾಲ್ಕು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಅಮೆರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಕದನ ವಿರಾಮ ಮಾತುಕತೆ ಜಾರಿಯಲ್ಲಿರುವಾಗಲೇ ದಕ್ಷಿಣ ಇರಾನ್ ಮೇಲೆ ಅಮೆರಿಕ ಮತ್ತೆ ದಾಳಿ.
ಮುಲ್ಲನಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 47 ರನ್ಗಳ ಅಂತರದಿಂದ ಮಣಿಸಿದ ರಾಜಸ್ಥಾನ ರಾಯಲ್ಸ್ ತಂಡವು ಎರಡನೇ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ
.IPL Stats: ಸೂರ್ಯವಂಶಿ 'ವೈಭವ', 2ನೇ ಕ್ವಾಲಿಫೈಯರ್ಗೆ ರಾಜಸ್ಥಾನ, SRH ನಿರ್ಗಮನ.
ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ದೀರ್ಘ ಅವಧಿಗೆ ಮುಂದುವರಿದರೆ ಜನರ ಆದಾಯ ಕಡಿಮೆ ಆಗಬಹುದು, ಅದರಿಂದಾಗಿ ದೇಶದ ವಿಮಾ ವಲಯದ ಬೆಳವಣಿಗೆ ಕಡಿಮೆ ಆಗಬಹುದು ಎಂದು (ಎಲ್ಐಸಿ) ಸಿಇಒ ಆರ್. ದೊರೈಸ್ವಾಮಿ ಅವರು ಹೇಳಿದ್ದಾರೆ.
.ಯುದ್ಧದಿಂದಾಗಿ ವಿಮಾ ವಲಯದ ಮೇಲೆ ಪರಿಣಾಮ: ದೊರೈಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.