ಚೆನ್ನೈ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಆಡಳಿತರೂಢ ಡಿಎಂಕೆಯ ಪ್ರಮುಖ ನಾಯಕ ವಿ.ಸೆಂಥಿಲ್ ಬಾಲಾಜಿ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಈ ಪ್ರಕರಣವು ಡಿಎಂಕೆಗೆ ಕಗ್ಗಂಟಾಗಿ ಪರಿಣಮಿಸಿದೆ.

‘ನಾನು ವಿಚಾರಣೆಗೆ ಹಾಜರಾಗುತ್ತೇನೆ. ಸೂಕ್ತ ಮಾಹಿತಿಗಳನ್ನು ನೀಡುತ್ತೇನೆ’ ಎಂದು ಶಾಸಕ ಸೆಂಥಿಲ್ ‘ಎಕ್ಸ್’ ಮೂಲಕ ತಿಳಿಸಿದ್ದಾರೆ.

ಸಿಬಿಐ ಮತ್ತು ತಮಿಳುನಾಡು ಪೋಲಿಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಸೆಂಥಿಲ್ ಹೆಸರಿರದೇ ಇದ್ದರೂ ಮಾರ್ಚ್ 17ರಂದು ವಿಚಾರಣೆಗೆ ಕರೆದಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಸೆಂಥಿಲ್ ಅಸ್ಪತ್ರೆಗೆ ಭೇಟಿನೀಡಿರುವುದನ್ನು ಉಲ್ಲೇಖಿಸಿ, ‘ಕಾಲ್ತುಳಿತಕ್ಕೆ ಸೆಂಥಿಲ್ ಅವರೇ ಕಾರಣರು’ ಎಂದು ನಟ ವಿಜಯ್ ನೇತೃತ್ವದ ಟಿವಿಕೆ ಆರೋಪಿಸಿತ್ತು.

ತಮಿಳುನಾಡು ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿರುವಾಗಲೇ ಸೆಂಥಿಲ್ ಅವರಿಗೆ ಸಿಬಿಐ ಸಮನ್ಸ್ ನೀಡಿರುವುದು ಬಿಜೆಪಿ, ಟಿವಿಕೆ ಸೇರಿದಂತೆ ವಿರೋಧಪಕ್ಷಗಳಿಗೆ ಡಿಎಂಕೆ ವಿರುದ್ಧ ಮುಗಿಬೀಳಲು ಅವಕಾಶ ಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.