ಶ್ಯೋಪುರ್ (ಮಧ್ಯಪ್ರದೇಶ): ‘ಕೌನ್ ಬನೇಗಾ ಕರೋಡ್ಪತಿ’ (ಕೆಬಿಸಿ) ಟಿವಿ ಶೋನಲ್ಲಿ ₹ 50 ಲಕ್ಷ ಗೆಲ್ಲುವ ಮೂಲಕ ದೇಶದ ಗಮನ ಸೆಳೆದಿದ್ದ ಮಧ್ಯಪ್ರದೇಶದ ಮಹಿಳಾ ತಹಶೀಲ್ದಾರ್ ₹2.5 ಕೋಟಿ ಹಗರಣದಲ್ಲಿ ಜೈಲು ಪಾಲಾಗಿದ್ದಾರೆ.

ಅಮಿತಾ ಸಿಂಗ್ ತೋಮರ್ ಬಂಧಿತ ತಹಶೀಲ್ದಾರ್. 2021ರಲ್ಲಿ ಬರೋಡಾ ತಾಲೂಕಿನ ಪ್ರವಾಹ ಪರಿಹಾರ ಹಂಚಿಕೆಯಲ್ಲಿ ನಡೆದಿದ್ದ ಅಕ್ರಮಗಳಿಗೆ ಸಂಬಂಧಿಸಿ ಗ್ವಾಲಿಯರ್ನಲ್ಲಿ ಗುರುವಾರ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಶಿವಪುರಿ ಜೈಲಿನಲ್ಲಿ ಇರಿಸಲಾಗಿದೆ.

‘ವಿಜಯಪುರ್ನಲ್ಲಿ ಸದ್ಯ ತಹಶೀಲ್ದಾರ್ ಆಗಿದ್ದ ಅಮಿತಾ ಅವರನ್ನು ಬುಧವಾರವೇ ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಹುದ್ದೆಯಿಂದ ವಜಾ ಮಾಡಿದ್ದರು. ಅಮಿತಾ ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವು ವಜಾ ಆಗಿದ್ದವು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘2.5 ಕೋಟಿ ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಒಬ್ಬ ತಹಶೀಲ್ದಾರ್ ಮತ್ತು 22 ಕಂದಾಯ ಅಧಿಕಾರಿಗಳನ್ನು ಬಂಧಿಸಲಾಗಿದೆ’ ಎಂದು ಶ್ಯೋಪುರ್ ಎಸ್ಪಿ ಸುಧೀರ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ಹಿಂದಿಯ ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ಅಮಿತಾ ಅವರು ಸ್ಪರ್ಧಿಯಾಗಿ ಪಾಲ್ಗೊಂಡು ₹ 50 ಲಕ್ಷ ಗೆದ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.