ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರನಾಥ ಗರ್ಭಗುಡಿ ಗೋಡೆಗೆ ಚಿನ್ನದ ಹಾಳೆಗಳ ಲೇಪನ: 230 ಕೆ.ಜಿ. ಚಿನ್ನ ಅರ್ಪಣೆ

Last Updated 25 ಅಕ್ಟೋಬರ್ 2022, 9:59 IST
ಅಕ್ಷರ ಗಾತ್ರ

ಡೆಹ್ರಡೂನ್‌:ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪಿಸಲು ಮುಂಬೈ ಉದ್ಯಮಿಯೊಬ್ಬರು230 ಕೆಜಿ ಚಿನ್ನ ಅರ್ಪಿಸಿದ್ದಾರೆ.

ಮುಂಬೈನ ವಜ್ರ ವ್ಯಾಪಾರಿಯೊಬ್ಬರು ಕೇದಾರನಾಥ ದೇವಸ್ಥಾನಕ್ಕೆ230 ಕೆಜಿ ಚಿನ್ನ ಅರ್ಪಿಸಿದ್ದಾರೆ. ಇದರಿಂದ ಗೋಡೆಗಳಿಗೆ ಚಿನ್ನದ ಹಾಳೆಗಳನ್ನು ಅಳವಡಿಸಲಾಗಿದೆ. ಈ ಹಾಳೆಗಳಲ್ಲಿ ಶಿವ, ಹಾವು , ನಂದಿ, ಡಮರುಗ, ತ್ರಿಶೂಲದ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

ಈ ಹಿಂದೆ ದೇವಾಲಯದ ಗರ್ಭ ಗುಡಿಯ ಗೋಡೆಗಳಿಗೆ ಬೆಳ್ಳಿಯ ಹಾಳೆಗಳನ್ನು ಅಳವಡಿಸಲಾಗಿತ್ತು. ಈ ಹಾಳೆಗಳನ್ನು ತೆಗೆದು ಬಂಗಾರದ ಹಾಳೆಗನ್ನು ಜೋಡಿಸಲಾಗಿದೆ. ಈ ಕೆಲಸಕ್ಕೆ ಉತ್ತರಾಖಂಡ ಸರ್ಕಾರ ಕೂಡ ಅನುಮತಿ ನೀಡಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

ಈ ಹಾಳೆಗಳನ್ನು ಅಳವಡಿಸಲು 230 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಇದನ್ನು ಮುಂಬೈ ವಜ್ರದ ವ್ಯಾಪಾರಿ ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಈ ನಡುವೆ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪನ ಮಾಡಬಾರದು ಎಂದು ಸ್ಥಳೀಯ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT