ನವದೆಹಲಿ: ಕಳೆದ ಎರಡು ವಾರಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಇದನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರೋಧಿಸಿದ್ದಾರೆ. ರಷ್ಯಾ ಮತ್ತು ಇರಾನ್ನಿಂದ ಅಗ್ಗದ ದರದಲ್ಲಿ ಇಂಧನವನ್ನು ಏಕೆ ಕೇಂದ್ರ ಸರ್ಕಾರ ಖರೀದಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ದೇಶದಲ್ಲಿ ತೈಲ ಬೆಲೆ ಮತ್ತೆ ಗಗನಕ್ಕೇರಿವೆ. ರಷ್ಯಾ ಮತ್ತು ಇರಾನ್ ದೇಶಗಳು ನಮಗೆ ಅಗ್ಗದ ದರದಲ್ಲಿ ಹಾಗೂ ಸಾಕಷ್ಟು ಪ್ರಮಾಣದಲ್ಲಿ ತೈಲ ಮತ್ತು ಅನಿಲವನ್ನು ನೀಡಲು ಸಿದ್ಧವಿವೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಅವರಿಂದ ಅಗ್ಗದ ತೈಲವನ್ನು ಏಕೆ ಖರೀದಿಸುತ್ತಿಲ್ಲ? ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
.ಪಶ್ಚಿಮ ಬಂಗಾಳ: ಗೋಹತ್ಯೆ ತಡೆಗೆ ಮುಸ್ಲಿಮರ ಸಹಮತ, ಹಿಂದೂ ವ್ಯಾಪಾರಿಗಳಿಗೇಕೆ ಆತಂಕ?.ಮಾಡೆಲ್ ಟ್ವಿಶಾ ಶರ್ಮಾ ಸಾವಿನ ಕೇಸ್ ತನಿಖೆ ಸಿಬಿಐ ಹೆಗಲಿಗೆ.
ಹೆಚ್ಚುತ್ತಿರುವ ಹಣದುಬ್ಬರ: ಜನರ ಸಂಕಷ್ಟ

ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ದೇಶದ 140 ಕೋಟಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಕೇಜ್ರಿವಾಲ್, ಪ್ರಧಾನಮಂತ್ರಿಯವರ ಅನಿವಾರ್ಯತೆಗಳಾದರೂ ಏನು? ಇಡೀ ದೇಶದ ಜನತೆ ತೊಂದರೆ ಅನುಭವಿಸುತ್ತಿದ್ದರೂ ನಾವು ರಷ್ಯಾ ಅಥವಾ ಇರಾನ್ನಿಂದ ತೈಲವನ್ನು ಏಕೆ ಖರೀದಿಸುತ್ತಿಲ್ಲ? ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ವಿಷಯದ ಕುರಿತು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.

ಎರಡು ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಸರಿಸುಮಾರು ₹7.5 ರಷ್ಟು ಏರಿಕೆ

ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದರ ನೇರ ಪರಿಣಾಮವಾಗಿ ಸೋಮವಾರ ಪೆಟ್ರೋಲ್ ಪ್ರತಿ ಲೀಟರ್ಗೆ ₹2.61 ಹಾಗೂ ಡೀಸೆಲ್ ₹2.71 ರಷ್ಟು ಹೆಚ್ಚಿಸಲಾಗಿದೆ.
.ಇರಾನ್ ಜೊತೆಗಿನ ಮಾತುಕತೆಯಲ್ಲಿ ಟ್ರಂಪ್ ಎಚ್ಚರಿಕೆಯ ಹೆಜ್ಜೆ: ಮಾರ್ಕೊ ರುಬಿಯೊ.ಬಿಜೆಪಿಯತ್ತ ದೆಬಾಶಿಶ್ ಸಮಂತರಾಯ್? ಬಿಜೆಡಿಗೆ ಮುಖಭಂಗ!.
ಮೇ 15 ರಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಒಟ್ಟಾರೆಯಾಗಿ ಸರಿಸುಮಾರು ₹7.5 ರಷ್ಟು ಏರಿಕೆ ಕಂಡಿದೆ.

ಲೋಕಸಭಾ ಚುನಾವಣೆಗೆ ಮುನ್ನ ಮಾರ್ಚ್ 2024ರಲ್ಲಿ ಪ್ರತಿ ಲೀಟರ್ಗೆ ₹2 ರಷ್ಟು ಕಡಿತಗೊಳಿಸಿದ್ದನ್ನು ಹೊರತುಪಡಿಸಿ, ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಧನ ದರಗಳು ಸ್ಥಿರವಾಗಿದ್ದವು. ಆದರೆ, ಪ್ರಸ್ತುತ ಸರಣಿ ಏರಿಕೆಯಿಂದಾಗಿ ತೈಲ ಬೆಲೆ ಮೇ 2022ರ ನಂತರದ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.