ತಿರುವನಂತಪುರ: ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಸತತ ಮನವೊಲಿಕೆ ನಂತರ, ಗೃಹ ಸಚಿವರಾಗಿ ಸಂಪುಟ ಸೇರಲು ರಮೇಶ್ ಚೆನ್ನಿತ್ತಲ ಒಪ್ಪಿಕೊಂಡಿದ್ದಾರೆ.

ರಮೇಶ್ ಚೆನ್ನಿತ್ತಲ ಅವರು ಈ ಬಾರಿ ಕೇರಳಂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ವಿ.ಡಿ. ಸತೀಶನ್ ಹೆಸರನ್ನು ಅಂತಿಮಗೊಳಿಸಿತು.

2011ರಲ್ಲೂ ಚೆನ್ನಿತ್ತಲ ಅವರಿಗೆ ಅವಕಾಶ ಕೈತಪ್ಪಿತ್ತು. ಈ ಬಾರಿಯೂ ಮುಖ್ಯಮಂತ್ರಿ ಸ್ಥಾನ ಸಿಗದ ಕಾರಣ ಮುನಿಸಿಕೊಂಡ ಚೆನ್ನಿತ್ತಲ, ಯುಡಿಎಫ್ ಸಭೆಯಿಂದ ದೂರ ಉಳಿದಿದ್ದರು. ಈಗ ಮನವೊಲಿಕೆ ನಂತರ ಸಂಪುಟ ಸೇರಲು ಅವರು ಒಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಕೆ.ಸಿ. ವೇಣುಗೋಪಾಲ್ ಕೂಡ ಸತೀಶನ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.

‘ರಾಜಕೀಯದಲ್ಲಿ ಅವಕಾಶಗಳು ವಿಭಿನ್ನ ರೂಪಗಳಲ್ಲಿ ಬರುತ್ತವೆ. ವೇಣುಗೋಪಾಲ್ ಅವರು ಎಐಸಿಸಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಕೇರಳಂನ ಯುಡಿಎಫ್ ಸರ್ಕಾರಕ್ಕೆ ಅವರ ಬೆಂಬಲ ಅತ್ಯಗತ್ಯ’ ಎಂದು ವಿ.ಡಿ ಸತೀಶನ್ ಹೇಳಿದ್ದಾರೆ.

ಚೆನ್ನಿತ್ತಲ ಅವರೊಂದಿಗೆ ಅವರ ಕೆಲವು ನಿಷ್ಠಾವಂತರು ಸಹ ಸಂಪುಟ ಸೇರುವ ಸಾಧ್ಯತೆ ಇದೆ.

ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ 2014ರಿಂದ 2016ರವರೆಗೆ ಚೆನ್ನಿತ್ತಲ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

‘ಎಲ್ಲ ಸಚಿವ ಸ್ಥಾನಗಳನ್ನು ಭಾನುವಾರದೊಳಗೆ ನಿರ್ಧರಿಸಲಾಗುತ್ತದೆ. ಇಡೀ ಸಚಿವ ಸಂಪುಟದ ಪ್ರಮಾಣ ವಚನ ಸೋಮವಾರ ನಡೆಯಲಿದೆ’ ಎಂದು ಸತೀಶನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಸಂಪುಟದ ಮೊದಲ ಸಭೆಯಲ್ಲಿ, ಕಾಂಗ್ರೆಸ್ನ ಚುನಾವಣಾ ಭರವಸೆಯಾದ ‘ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ’ದ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

‘ತೃಪ್ತಿದಾಯಕ ಮಾತುಕತೆ’

‘ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ, ಖಾತೆ ಹಂಚಿಕೆ ಬಗ್ಗೆ ಮಾತುಕತೆ ತೃಪ್ತಿದಾಯಕವಾಗಿ ಮುಂದುವರಿದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಸಣ್ಣಿ ಜೋಸೆಫ್ ಶನಿವಾರ ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಜೋಸೆಫ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಯುಡಿಎಫ್ ಮಿತ್ರ ಪಕ್ಷಗಳಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಮಾತುಕತೆ ಸರಾಗವಾಗಿ ನಡೆದಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.