ನವದೆಹಲಿ/ ತಿರುವನಂತಪುರ (ಪಿಟಿಐ): ಕೆಪಿಸಿಸಿಯ ಮಾಜಿ ಅಧ್ಯಕ್ಷರು, ಕಾರ್ಯಾಧ್ಯಕ್ಷರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದರೂ, ಕಾಂಗ್ರೆಸ್ ಹೈಕಮಾಂಡ್ಗೆ ಕೇರಳಂ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸಲು ಮಂಗಳವಾರವೂ ಸಾಧ್ಯವಾಗಲಿಲ್ಲ. ಆದರೆ, ಈ ಕುರಿತು ವಾರದಿಂದೀಚೆಗೆ ನಡೆಯುತ್ತಿರುವ ಚರ್ಚೆ ಬಹುತೇಕ ಅಂತಿಮ ಘಟ್ಟಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸ್ಥಾನ ಕ್ಕಾಗಿ ಪಟ್ಟುಹಿಡಿದಿರುವ ಕೆ.ಸಿ ವೇಣುಗೋಪಾಲ್ ಮತ್ತು ವಿ.ಡಿ.ಸತೀಶನ್ ಇಬ್ಬರೂ ಕಣದಿಂದ ಹಿಂದೆ ಸರಿಯಲು ಒಪ್ಪದ ಕಾರಣ ಮತ್ತು ಇಬ್ಬರಲ್ಲಿ ಒಬ್ಬರನ್ನು ಅಂತಿಮಗೊಳಿಸಲು ಹೈಕಮಾಂಡ್ಗೆ ಸುಲಭವಾಗಿ ಆಗದ ಕಾರಣ ಅನಿಶ್ಚಿತತೆ ಮುಂದುವರಿದಿದೆ.

ಕೆಪಿಸಿಸಿ ಮಾಜಿ ಅಧ್ಯಕ್ಷರಾದ ವಿ.ಎಂ. ಸುಧೀರನ್, ಎಂ. ರಾಮಚಂದ್ರನ್, ಕೆ. ಸುಧಾಕರನ್, ಕೆ. ಮುರಳೀಧರನ್ ಮತ್ತು ಎಂ.ಎಂ ಹಸನ್ ಅವರು ಮಂಗಳವಾರ ನವದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಹಿರಿಯ ಶಾಸಕರಾದ ಟಿ. ರಾಧಾಕೃಷ್ಣನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಪಿ.ಸಿ ವಿಷ್ಣುನಾಥ್, ಶಾಫಿ ಪರಂಬಿಲ್, ಎ.ಪಿ. ಅನಿಲ್ ಕುಮಾರ್ ಅವರನ್ನೂ ಹೈಕಮಾಂಡ್ ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿತು. ಹಿರಿಯ ಮುಖಂಡ ಎ.ಕೆ. ಆ್ಯಂಟನಿ ಅವರೊಂದಿಗೂ ರಾಹುಲ್ ದೂರವಾಣಿ ಮೂಲಕ ಚರ್ಚೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ. ಮುರಳೀಧರನ್, ‘ಕೇರಳಂ ಮುಖ್ಯಮಂತ್ರಿ ಹೆಸರು ಮಂಗಳವಾರ ರಾತ್ರಿ ಅಥವಾ ಬುಧವಾರ ಘೋಷಣೆಯಾಗಲಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-326900842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.