ತ್ರಿಶ್ಯೂರ್/ಕೇರಳ: ಕೇರಳದ ಪ್ರಸಿದ್ಧ ‘ತ್ರಿಶ್ಯೂರ್ ಪೂರಂ’ಗಾಗಿ (ಉತ್ಸವ) ಮುಂಡತ್ತಿಕೋಡ್ ಎಂಬಲ್ಲಿ ಪಟಾಕಿ ತಯಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿ13 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ತ್ರಿಶ್ಯೂರ್ ಪೂರಂ ಉತ್ಸವದ ‘ಮಾದರಿ ಸಿಡಿಮದ್ದು ಪ್ರದರ್ಶನ’ ಏಪ್ರಿಲ್ 24ರಂದು ನಡೆಯಲಿದೆ. ಇದಕ್ಕಾಗಿ ತಿರುವಂಬಾಡಿ ದೇವಸ್ವಂ ಬೋರ್ಡ್ ಪರವಾಗಿ ಕಾರ್ಮಿಕರು ಮುಂಡತ್ತಿಕೋಡ್ನ ಭತ್ತದ ಗದ್ದೆಯಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ಪಟಾಕಿ ತಯಾರಿಸುತ್ತಿದ್ದರು.

ಮಧ್ಯಾಹ್ನ 3.30ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದೆ. ಆಗ ಶೆಡ್ಗಳಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಮೂವರು ಕಾರ್ಮಿಕರ ದೇಹಗಳು ಛಿದ್ರಗೊಂಡು ಘಟಕದ ಹೊರಗೆ ಚದುರಿ ಬಿದ್ದಿವೆ. ಶೆಡ್ಗಳು ಕ್ಷಣಮಾತ್ರದಲ್ಲೇ ಉರಿದು ಭಸ್ಮವಾಗಿವೆ.

‘13 ಕಾರ್ಮಿಕರು ಮೃತಪಟ್ಟಿರುವುದನ್ನು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ದೃಢಪಡಿಸಿದೆ. ಐದು ಮೃತದೇಹಗಳನ್ನು ಗುರುತಿಸಲಾಗಿದೆ. ಮೂರು ಮೃತದೇಹಗಳ ಭಾಗಗಳು ಗುರುತು ಸಿಗದ ರೀತಿಯಲ್ಲಿ ಘಟನೆ ನಡೆದ ಸ್ಥಳದಲ್ಲಿ ಛಿದ್ರಗೊಂಡು ಬಿದ್ದಿದ್ದವು’ ಎಂದು ಮೂಲಗಳು ಹೇಳಿವೆ.

ಬೆಂಕಿ ವ್ಯಾಪಿಸಿದ್ದರಿಂದ ಮತ್ತು ಶೆಡ್ಗಳ ಒಳಗೆ ಸಂಗ್ರಹಿಸಿಟ್ಟ ಸಿಡಿಮದ್ದು ಸ್ಫೋಟಗೊಳ್ಳುತ್ತಲೇ ಇದ್ದಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಯಿತು. ಶೆಡ್ಗಳಿಂದ ಕಾರ್ಮಿಕರನ್ನು ರಕ್ಷಿಸಲು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ನೆರವಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಡತ್ತಿಕೋಡ್ ಪಟಾಕಿ ತಯಾರಿಕಾ ಘಟಕವು ತ್ರಿಶ್ಯೂರ್ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಸುಟ್ಟ ಗಾಯಗಳಿಂದ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೂರ್ಯನ ಪ್ರಖರ ಕಿರಣಗಳು ನೇರವಾಗಿ ಗನ್ಪೌಡರ್ (ಸಿಡಿಮದ್ದು) ಇರಿಸಿದ್ದ ಚೀಲದ ಮೇಲೆ ಬೀಳುತ್ತಿದ್ದವು. ಬಿಸಿಲಿನ ಝಳದಿಂದ ಅವಘಡ ಸಂಭವಿಸಿರಬಹುದು
ವಿಲ್ಸನ್ ಸ್ಫೋಟದಲ್ಲಿ ಬದುಕುಳಿದ ಕಾರ್ಮಿಕ

ಚಿಕಿತ್ಸೆ , ಮೇಲ್ವಿಚಾರಣೆಗೆ ವಿಶೇಷ ವ್ಯವಸ್ಥೆ

ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಮತ್ತು ವಿಶೇಷ ಆರೈಕೆ ಕಲ್ಪಿಸಲು ತ್ರಿಶ್ಯೂರ್ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸನ್ನದ್ಧವಾಗಿರುವಂತೆ ತ್ರಿಶ್ಯೂರ್ ಸುತ್ತಲಿನ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ‘ಎಷ್ಟು ಜನರು ಈ ಶೆಡ್ಗಳಲ್ಲಿ ಇದ್ದರು ಮೃತಪಟ್ಟವರೆಷ್ಟು ಗಾಯಗೊಂಡವರು ಎಷ್ಟು ಮಂದಿ ಎನ್ನುವುದು ಇನ್ನೂ ನಿಖರವಾಗಿ ತಿಳಿದಿಲ್ಲ’ ಎಂದು ವಡಕಾಂಚೇರಿ ನಗರಸಭೆ ಅಧ್ಯಕ್ಷ ಪಿ.ಎನ್ ಸುರೇಂದ್ರನ್ ಹೇಳಿದ್ದಾರೆ. ತ್ರಿಶ್ಯೂರ್ ಜಿಲ್ಲಾಧಿಕಾರಿ ದುರಂತದ ಕುರಿತು ಮ್ಯಾಜಿಸ್ಟೀರಿಯಲ್ ಹಂತದ ತನಿಖೆಗೆ ಆದೇಶಿಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಕಾರ್ಯವಿಧಾನ ರೂಪಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

₹2 ಲಕ್ಷ ಪರಿಹಾರ ಘೋಷಣೆ:

ಮೃತರ ಹತ್ತಿರದ ಸಂಬಂಧಿಕರಿಗೆ ₹2 ಲಕ್ಷ ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಘೋಷಿಸಲಾಗಿದೆ. ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.