ಕೊಚ್ಚಿ (ಪಿಟಿಐ): ಕೇರಳಂನ ಮಲಪ್ಪುರಂ ಜಿಲ್ಲೆಯ ತಿರುರಂಗಾಡಿಯಲ್ಲಿ ಕಳೆದ ಫೆಬ್ರವರಿಯಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳು ಮತ್ತು ಸ್ಫೋಟಕಗಳು ಪತ್ತೆಯಾದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕೊಚ್ಚಿಯಲ್ಲಿರುವ ಎನ್ಐಎ ವಿಶೇಷ ಕೋರ್ಟ್ಗೆ ಪ್ರಕರಣದ ಎಲ್ಲ ದಾಖಲೆಗಳನ್ನು ವರ್ಗಾಯಿಸಲು ಪರಪ್ಪನಂಗಡಿ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಇತ್ತೀಚೆಗೆ ತನಿಖಾ ಸಂಸ್ಥೆ ಮನವಿ ಮಾಡಿದೆ.

ತಿರುರಂಗಡಿ ಸಮೀಪದ ಚೆಮ್ಮಡ್ ಬಳಿ ಫೆಬ್ರವರಿ 7ರಂದು ಈರುಳ್ಳಿ ತುಂಬಿದ್ದ ಲಾರಿಯಲ್ಲಿ 89,600 ಜಿಲೆಟಿನ್ ಕಡ್ಡಿಗಳಿದ್ದ 448 ಬಾಕ್ಸ್ಗಳು, 10,500 ಸ್ಫೋಟಕಗಳು ಪತ್ತೆಯಾಗಿದ್ದವು.

ಪೊಲೀಸರು ದಾಳಿ ನಡೆಸಿ ಸ್ಫೋಟಕವಿದ್ದ ಲಾರಿ ವಶಕ್ಕೆ ಪಡೆದು ಆರುಮಂದಿಯನ್ನು ಬಂಧಿಸಿದ್ದರು.

‘ಸ್ಫೋಟಕಗಳು ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ್ದು, ಕರ್ನಾಟಕದ ವಿಜಯಪುರದಿಂದ ಸಾಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಎನ್ಐಎ ವಿಸ್ತೃತ ತನಿಖೆಗೆ ಬಯಸಿದೆ. ಕೇಂದ್ರ ಸಂಸ್ಥೆಗೆ ಪ್ರಕರಣ ವರ್ಗಾಯಿಸಲಾಗಿದೆ’ ಎಂದು ತಿರುರಂಗಡಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಫೋಟಕ ಸಾಗಣೆ ಜಾಲದ ಶಂಕೆ ಮೇಲೆ ಆರೋಪಿಗಳ ವಿಚಾರಣೆ ನಡೆಸಲು ಎನ್ಐಎ ಸಿದ್ಧತೆ ನಡೆಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1996083947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.