ತಿರುವನಂತಪುರ: ಮುಂಗಾರು ಪ್ರವೇಶಿಸಿದ ಬಳಿಕ ಇದುವರೆಗೆ ಕೇರಳದಲ್ಲಿ ವಾಡಿಕೆಗಿಂತ ಶೇ 65ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದೂ ತಿಳಿಸಿದೆ. ನೈಋತ್ಯ ಮುಂಗಾರು ವಾಡಿಕೆಗಿಂತ ಒಂದು ವಾರ ತಡವಾಗಿ ಜೂನ್ 8ರಂದು ಕೇರಳಕ್ಕೆ ತಲುಪಿತ್ತು.
‘ಈ ಬಾರಿ ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಇದುವರೆಗೆ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿದಿದೆ’ ಎಂದು ಐಎಂಡಿಯ ಕೇರಳದ ಪ್ರಭಾರ ನಿರ್ದೇಶಕಿ ಡಾ. ವಿ.ಕೆ. ಮಿನಿ ತಿಳಿಸಿದ್ದಾರೆ.
‘ಬಂಗಾಳ ಕೊಲ್ಲಿಯಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಂಡ ಪರಿಣಾಮ ನೈಋತ್ಯ ಮುಂಗಾರು ಇನ್ನೂ ಚುರುಕುಗೊಂಡಿಲ್ಲ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.