ಕೊಚ್ಚಿ: ಕೇರಳದ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ ಯೋಗಂ)ನ ಪಧಾನ ಕಾರ್ಯದರ್ಶಿ ವೆಳ್ಳಾಪ್ಪಳ್ಳಿ ನಟೇಶನ್ ಮತ್ತು ಇತರ ನಿರ್ದೇಶಕರನ್ನು ಅನರ್ಹಗೊಳಿಸಿರುವ ಕೇರಳ ಹೈಕೋರ್ಟ್, ಯೋಗಂನ ಸಂಪೂರ್ಣ ನಿರ್ದೇಶಕ ಮಂಡಳಿಯನ್ನು ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.

ಕಂಪನಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಸ್ಎನ್ಡಿಪಿ ಯೋಗಂ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಆರ್. ರವಿ ಆದೇಶದಲ್ಲಿ ತಿಳಿಸಿದ್ದಾರೆ.

ಕೇರಳದ ಪ್ರಭಾವಿ ಈಳವ ಸಮುದಾಯದ ಸಂಘಟನೆಯಾದ ಎಸ್ಎನ್ಡಿಪಿ ಯೋಗಂ ಅನ್ನು ವೆಳ್ಳಾಪ್ಪಳ್ಳಿ ನಟೇಶನ್ ಅವರು ಎರಡೂವರೆ ದಶಕಗಳಿಂದ ಮುನ್ನಡೆಸುತ್ತಿದ್ದರು. ಎಸ್ಎನ್ಡಿಪಿ ಯೋಗಂನ ಅಕ್ರಮಗಳ ಕುರಿತು ಪ್ರೊ. ದಿವಂಗತ ಎಂ.ಕೆ. ಸಾನು, ಎಸ್ಎನ್ಡಿಪಿ ಸಂರಕ್ಷಣಾ ಸಮಿತಿಯ ಚಂದ್ರಸೇನನ್ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದರು.

ವೆಳ್ಳಾಪ್ಪಳ್ಳಿ ನಟೇಶನ್ ಅವರ ಪುತ್ರ ತುಷಾರ್ ವೆಳ್ಳಾಪ್ಪಳ್ಳಿ ಅವರನ್ನೂ ನಿರ್ದೇಶಕ ಮಂಡಳಿಯಿಂದ ಅನರ್ಹಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.