ತಿರುವನಂತಪುರ: ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಗಳಿಸಿದ ಬೆನ್ನಲ್ಲೇ, ತನ್ನ ಪ್ರಮುಖ ಚುನಾವಣಾ ಭರವಸೆಯಾದ 'ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ' ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ಆರಂಭವಾಗಿವೆ.

ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಜನರ ಲಿಂಗಾಧಾರಿತ (ಮಕ್ಕಳನ್ನೂ ಸೇರಿ) ದತ್ತಾಂಶ ಸಂಗ್ರಹಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್ (ಕೆಎಸ್ಆರ್ಟಿಸಿ) ನಿರ್ಧರಿಸಿದ್ದು, ಶನಿವಾರದಿಂದಲೇ ದತ್ತಾಂಶ ಸಂಗ್ರಹಿಸಲು ಆರಂಭಿಸಲಾಗಿದೆ.

ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಟಿಕೆಟ್ ನೀಡುವ ಗ್ಯಾರಂಟಿಯನ್ನು ತನ್ನ ಪ್ರಣಾಳಿಕೆಯಲ್ಲಿ ಯುಡಿಎಫ್ ನೀಡಿತ್ತು. ಸರ್ಕಾರ ರಚನೆಯಾಗುವ ಮುನ್ನವೇ ಕೆಎಸ್ಆರ್ಟಿಸಿ ದತ್ತಾಂಶ ಸಂಗ್ರಹಕ್ಕೆ ಮುಂದಾಗಿದೆ. ಈ ಗ್ಯಾರಂಟಿ ಜಾರಿಗೆ ಬೇಕಾದ ಹಣಕಾಸಿನ ಕುರಿತು ಅಂದಾಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

‘ಸರ್ಕಾರಿ ಬಸ್ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದರೆ ನಿಗಮಕ್ಕೆ ನಷ್ಟವಾಗಲಿದೆ’ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.