ತಿರುವನಂತಪುರ: ಕೇರಳಂ ವಿಧಾನಸಭೆಯಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮುಸ್ಲಿಂ ಲೀಗ್ ಶಾಸಕ ಎ.ಕೆ.ಎಂ. ಅಶ್ರಫ್ ಭಾಷಣದಲ್ಲಿ ಬಸವಣ್ಣನವ ವಚನ ಉಲ್ಲೇಖಿಸಿದ್ದಾರೆ.
.ಕೇರಳಂ ವಿಧಾನಸಭೆ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಅಶ್ರಫ್.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ನಾಯಕರು ಕೋಮುವಾದ ಭಾಷಣ ಮಾಡಿದ್ದರು. ಬಾರಿ ತೆರೆದರೆ ದ್ವೇಷದ ಮಾತುಗಳನ್ನು ಆಡುವ ಕರ್ನಾಟಕ ನಾಯಕರು ಮಂಜೇಶ್ವರದ ಪ್ರೀತಿಯ ಮಾರುಕಟ್ಟೆಯಲ್ಲಿ ಕೆಡವಲು ಭಾರಿ ಪ್ರಯತ್ನಪಟ್ಟರು. ಇವೆಲ್ಲದರ ನಡುವೆಯೂ ನನ್ನನ್ನು ಇಲ್ಲಿ ಕಳುಹಿಸಿ ಜಾತ್ಯತೀತ ಮನಸ್ಸುಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದ್ದಾರೆ.

ಕೋಟ್ಯಂತರ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ದಾರ್ಶನಿಕ, ಕವಿಯೂ ಆದ ಬಸವಣ್ಣವರು ಜಾತ್ಯತೀತತೆ, ಮನುಷ್ಯತ್ವದ ಬಗ್ಗೆ ಬರೆದ ವಚನ, ಪ್ರತಿಯೊಬ್ಬ ಕನ್ನಡಿಗರ ಮನಸ್ಸಲ್ಲೂ ಇದೆ ಎನ್ನುತ್ತಾ, ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎನ್ನುವ ಸಾಲುಗಳನ್ನು ಪ್ರಸ್ತಾಪಿಸಿದರು.
.ಅಶ್ರಫ್ ಕೊಲೆ ಪ್ರಕರಣ: ಕೇರಳದಲ್ಲಿ ಮಾಹಿತಿ ಸಂಗ್ರಹ.
ಅಲ್ಲದೆ ಉತ್ತರ ಕನ್ನಡದ ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ಮೃತಪಟ್ಟ ಕೇರಳಂನ ಅರ್ಜುನ್ ಪತ್ತೆಗಾಗಿ ಕರ್ನಾಟಕಕ್ಕೆ ಬಂದಿದ್ದನ್ನೂ ಉಲ್ಲೇಖಿಸಿದರು. ಅರ್ಜುನ್ ಅವರ ತಾಯಿಯೇ ನನಗೆ ಈ ಚುನಾವಣೆಯಲ್ಲಿ ಠೇವಣಿ ಹಣ ನೀಡಿದರು ಎಂದು ನೆನಪಿಸಿಕೊಂಡರು.

ಅಲ್ಲದೆ ಕೇರಳಂ ಈಗಿನ ಮುಖ್ಯಮಂತ್ರಿ ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂದು ಹೇಳಿ, ಬಸವಣ್ಣನವರ, ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಎನ್ನುವ ವಚನವನ್ನೂ ಉಲ್ಲೇಖಿಸಿದರು.

ಎರಡು ಬಾರಿಗೆ ಅವರು ಮಂಜೇಶ್ವರದಿಂದ ಆಯ್ಕೆಯಾಗಿದ್ದು, ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ಗಮನಸೆಳೆದಿದ್ದರು.
.ಅಶ್ರಫ್ ಹತ್ಯೆ: ನ್ಯಾಯ, ಪರಿಹಾರಕ್ಕೆ ಕೇರಳದಾದ್ಯಂತ ಕೂಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.