ಮುಂಬೈ: ಬಹುಚರ್ಚಿತ ವಿಲಾಸಿ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆದಿದ್ದ ವೈದ್ಯ ಡಾ.ಅಜಯ್ ತಾವರೆಯನ್ನು ಕಿಡ್ನಿ ಕಸಿ ದಂಧೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

2022ರಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆ ರೂಬಿ ಹಾಲ್ ಕ್ಲಿನಿಕ್ನಲ್ಲಿ ಕಿಡ್ನಿ ಕಸಿ ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ ನಗರ ಅಪರಾಧ ವಿಭಾಗವು ವೈದ್ಯ ಅಜಯ್ ತಾವರೆಯನ್ನು ಬಂಧಿಸಿದೆ. ಇಂದು (ಗುರುವಾರ) ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ) ನಿಖಿಲ್ ಪಿಂಗಾಳೆ ಹೇಳಿದ್ದಾರೆ.

2022ರಲ್ಲಿ ಅಜಯ್ ತಾವರೆ ಕಿಡ್ನಿ ಕಸಿ ಅನುಮೋದಿಸುವ ಪ್ರಾದೇಶಿಕ ಅಧಿಕಾರ ಸಮಿತಿಯ ಮುಖ್ಯಸ್ಥರಾಗಿದ್ದರು. ಈ ವೇಳೆ ರೂಬಿ ಹಾಲ್ ಕ್ಲಿನಿಕ್ನಲ್ಲಿ ಅಕ್ರಮವಾಗಿ ಕಿಡ್ನಿ ಕಸಿ ಮಾಡಲಾಗಿತ್ತು. ಹಣ ಹಂಚಿಕೊಳ್ಳುವ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದ ಪ್ರಕರಣ ಬೆಳಕಿಗೆ ಬಂಧಿದೆ ಎದು ಅವರು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ 15 ಜನರ ವಿರುದ್ಧ ದೂರ ದಾಖಲಾಗಿದೆ.

ಈ ಹಿಂದೆ ಅಜಯ್ ತಾವರೆ ವಿಲಾಸಿ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಪೊಲೀಸರು ಸಂಗ್ರಹಿಸಿದ್ದ, 17 ವರ್ಷ ವಯಸ್ಸಿನ ಬಾಲಕನ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆದು ಬೇರೊಬ್ಬರ ರಕ್ತವನ್ನು ಇರಿಸಿದ್ದ ಘಟನೆಯಲ್ಲೂ ಬಂಧಿತನಾಗಿದ್ದ.
.ಪೋಶೆ ಕಾರು ಅಪಘಾತ: ಮತ್ತಿಬ್ಬರ ಬಂಧನ.ಪೋಶೆ ಕಾರು ಅಪಘಾತ: ಹಾಸ್ಯ ಕಲಾವಿದ ಉತ್ಸವ್ ದೀಕ್ಷಿತ್ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.