ಕಾನ್ಪುರ: ಹಲವು ಖಾಸಗಿ ಆಸ್ಪತ್ರೆಗಳ ಮೂಲಕ ಅಕ್ರಮವಾಗಿ ಮೂತ್ರಪಿಂಡ ಕಸಿ ಮಾಡುತ್ತಿದ್ದ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಪತ್ತೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವೈದ್ಯರು ಮತ್ತು ಇನ್ನೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಮೆಡ್ ಲೈಫ್ ಆಸ್ಪತ್ರೆ, ಅಹುಜಾ ಆಸ್ಪತ್ರೆ, ಪ್ರಿಯಾ ಆಸ್ಪತ್ರೆಗಳಲ್ಲಿ ಶೋಧ ನಡೆಸಿದ ಬಳಿಕ ಜಾಲ ಪತ್ತೆಯಾಗಿದೆ. ಆರರಿಂದ ಏಳು ಆಸ್ಪತ್ರೆಗಳು ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಜಾಲದ ಪ್ರಮುಖ ಆರೋಪಿಯನ್ನು ಶಿವಂ ಅಗರ್ವಾಲ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಂಬಿಎ ವಿದ್ಯಾರ್ಥಿಯಿಂದ ₹10 ಲಕ್ಷಕ್ಕೆ ಮೂತ್ರಪಿಂಡವನ್ನು ಪಡೆದು ರೋಗಿಯೊಬ್ಬರಿಗೆ ₹60 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಶಿವಂ ಅಗರ್ವಾಲ್ ತನ್ನನ್ನು ವೈದ್ಯನಂತೆ ಬಿಂಬಿಸಿಕೊಂಡಿದ್ದ ಮತ್ತು ಟೆಲಿಗ್ರಾಮ್ ಆ್ಯಪ್ನಲ್ಲಿ ಗ್ರೂಪ್ ಮೂಲಕ ಮೂತ್ರಪಿಂಡ ದಾನಿಗಳನ್ನು ಸೆಳೆಯುತ್ತಿದ್ದ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವ್ಯಕ್ತಿಗಳು ಮತ್ತು ಡಯಾಲಿಸಿಸ್ ರೋಗಿಗಳನ್ನು ಗುರಿಯಾಗಿಸಿ ದಂಧೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ ಎಂದು ಪೊಲೀಸ್ ಕಮಿಷನರ್ ರಘುಬೀರ್ ಲಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.