ಮುಂಬೈ: ಜನಗಣತಿಯ ನಂತರ ಭಾರತದಲ್ಲಿನ ಮುಸ್ಲಿಮರ ಜನಸಂಖ್ಯೆಯು ಇಂಡೋನೇಷ್ಯಾ ಜನಸಂಖ್ಯೆಯಷ್ಟಾಗಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶನಿವಾರ(ಮೇ 9) ಹೇಳಿದ್ದಾರೆ.

ಕೊನೆಯ ಬಾರಿ 2011ರಲ್ಲಿ ಜನಗಣತಿ ಮಾಡಲಾಗಿತ್ತು. 2021ರಲ್ಲಿ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಜನಸಂಖ್ಯೆಯು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾರ್ಸಿ ಸಮುದಾಯದ ಜನಸಂಖ್ಯೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ದೇಶದಲ್ಲಿ ಪಾರ್ಸಿ ಸಮುದಾಯದ ಜನಸಂಖ್ಯೆಯು 52–55 ಸಾವಿರವಿದೆ. ಅವರು ದೇಶದಲ್ಲಿನ ಅತಿಚಿಕ್ಕ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅವರ ರಕ್ಷಣೆಗಾಗಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಯಾವುದೇ ಸಮುದಾಯದ ಜನಸಂಖ್ಯೆಯು ಎಷ್ಟಾದರೂ ಆಗಲಿ, ಎಲ್ಲರೂ ಭಾರತೀಯರೇ ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.