ಕೊಡೈಕೆನಾಲ್: ಇಲ್ಲಿನ ಸಿಲ್ವರ್ ಕಾಸ್ಕೇಡ್ ಪ್ರವಾಸಿ ತಾಣದ ಪ್ರವೇಶ ದ್ವಾರದಲ್ಲಿ ಶುಕ್ರವಾರ ಕಾರೊಂದನ್ನು ತಪಾಸಣೆ ನಡೆಸಿದ ಚುನಾವಣಾ ಆಯೋಗದ ವಿಚಕ್ಷಣ ದಳದ ಅಧಿಕಾರಿಗಳು ಪಿಸ್ತೂಲ್ ಹೊಂದಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರವಾಸಿ ತಾಣಗಳ ಪ್ರವೇಶ ದ್ವಾರಗಳಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ವಾಹನಗಳ ತಪಾಸಣೆ ಮಾಡುತ್ತಿದ್ದರು. ಟೆನ್ಕಾಶಿಯ ಮಾವಲೂರಿನಿಂದ ಬಂದಿದ್ದ ಪ್ರವಾಸಿಗರ ಕಾರನ್ನು ಪರಿಶೀಲಿಸಿದಾಗ ಪಿಸ್ತೂಲು ಪತ್ತೆಯಾಗಿತ್ತು.

ಕಾರಿನಲ್ಲಿದ್ದ ನಾಲ್ವರು ಪರಿಶೀಲನೆಗೆ ಸಹಕರಿಸದೆ, ಪರಾರಿಯಾಗಿದ್ದರು. ಕೊಡೈಕೆನಾಲ್ ಪೊಲೀಸರಿಗೆ ಮಾಹಿತಿ ನೀಡಿದ ವಿಚಕ್ಷಣ ದಳ ಕಾರನ್ನು ಬೆನ್ನತ್ತಿ ಅಡ್ಡಗಟ್ಟಿತು. ಪಿಸ್ತೂಲ್ ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.