ಕೊಪ್ಪಳ: ‘ನರೇಂದ್ರ ಮೋದಿ ಪ್ರಧಾನಿಯಾದ 12 ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕ್ಷೀಣವಾಗಿದ್ದು, ರೂಪಾಯಿ ಮೌಲ್ಯ ಸಾರ್ವಕಾಲಿಕವಾಗಿ ಕುಸಿತವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆಡಳಿತದ ವೈಫಲ್ಯದ ಕಾರಣಕ್ಕೆ ಮೋದಿ ರಾಜೀನಾಮೆ ಕೊಡಬೇಕು’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಆಗ್ರಹಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಯುದ್ಧದ ನೆಪವನ್ನೇ ಮುಂದಿಟ್ಟುಕೊಂಡು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಇಂಧನ ಬೆಲೆ ಮತ್ತೆ ₹5ರಷ್ಟು ಹೆಚ್ಚಳವಾಗಲಿದೆ. ಯುದ್ಧಕ್ಕೂ ಇಂಧನ ಬೆಲೆ ಏರಿಕೆಗೂ ಸಂಬಂಧವಿಲ್ಲ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಐದು ರಾಜ್ಯಗಳ ಚುನಾವಣೆಯ ಸಮಯದಲ್ಲಿ ಬೆಲೆ ಹೆಚ್ಚಳ ಮಾಡದವರು ಫಲಿತಾಂಶ ಬಂದ ಬಳಿಕ ಮಾಡಿದ್ದು ಯಾಕೆ’ ಎಂದು ಟೀಕಿಸಿದರು.

‘ಜಗತ್ತಿನಲ್ಲಿ ಉತ್ಪಾದನೆಯಾಗುವ ಚಿನ್ನದ ಪಾಲಿನಲ್ಲಿ ಭಾರತವೇ ಶೇ 90ರಷ್ಟು ಖರೀದಿ ಮಾಡುತ್ತದೆ. ಆದ್ದರಿಂದ ವಿದೇಶದಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯ. ನಮ್ಮಲ್ಲಿ ಸಣ್ಣ ಕಾರ್ಯಕ್ರಮವಾದರೂ ಚಿನ್ನ ಬೇಕು ಎನ್ನುವುದು ಸಹಜವಾಗಿದೆ. ಇಂತಹ ಸ್ಥಿತಿ ಇರುವಾಗ ಚಿನ್ನ ಖರೀದಿಸಬೇಡಿ ಎಂದು ಮೋದಿ ಹೇಳಿದ್ದು ಸರಿಯೇ’ ಎಂದು ಪ್ರಶ್ನಿಸಿದರು.

‘ದೇಶದಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ವಾಗಿ ಕುಸಿದಿದೆ. ದೇಶಿಯವಾಗಿ ಅಗುತ್ತಿರುವ ಉತ್ಪಾದನೆಯನ್ನು ಯಾರೂ ಕೇಳುತ್ತಿಲ್ಲ. ಆಮದು ಪ್ರಮಾಣ ಹೆಚ್ಚಾಗಿ ರೂಪಾಯಿ ಮೌಲ್ಯವೂ ಕಡಿಮೆಯಾಗಿದೆ. ವಿದೇಶಿ ಬಂಡವಾಳ ಹೂಡಿಕೆ (ಎಫ್ಡಿಐ) ಹೆಚ್ಚಳವಾಗದ ಹೊರತು ದೇಶದ ರೂಪಾಯಿ ಮೌಲ್ಯ ಏರಲು ಸಾಧ್ಯವೇ ಇಲ್ಲ. ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳುವ ಬದಲು ಜಾತಿ ಹಾಗೂ ಧರ್ಮದ ಮೇಲೆ ಕೇಂದ್ರ ಆಡಳಿತ ಮಾಡುತ್ತಿದೆ. ಬದುಕಿಗೆ ಸರಳ ಸೂತ್ರಗಳನ್ನು ಅನ್ವಯಿಸಿ, ಇಂಧನ ಉಳಿಸಿ ಎಂದು ದೇಶದ ಜನರಿಗೆ ಕರೆ ನೀಡುವ ಪ್ರಧಾನಿ ಇನ್ನೊಂದೆಡೆ ಆರು ರಾಷ್ಟ್ರಗಳ ಪ್ರವಾಸಕ್ಕೆ ಹೋಗಿದ್ದಾರೆ. ಇಂಥ ದ್ವಿಮುಖ ನೀತಿ ಯಾಕೆ’ ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರದ ಆರ್ಥಿಕ ಅಶಿಸ್ತಿನಿಂದಾಗಿ ಎಲ್ಲ ಸಮಸ್ಯೆಗಳು ಎದುರಾಗಿವೆ. ಪ್ರಧಾನಿಗೆ ದೇಶದ ಬಗ್ಗೆ ನಿಜವಾಗಿಯೂ ಕಳಕಳಿಯಿದ್ದರೆ ರಾಜೀನಾಮೆ ಕೊಡಬೇಕು. ಅವರಿಗೆ ಅಧಿಕಾರ ಮಾಡಲು ಆಗುವುದಿಲ್ಲ. ಯೋಜನಾ ಆಯೋಗ ಸೇರಿದಂತೆ ವಿವಿಧೆಡೆ ಹೆಸರುಗಳನ್ನು ಬದಲಾಯಿಸಿದ್ದಷ್ಟೇ ಅವರ ಸಾಧನೆ. ನಮ್ಮ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-35-617847199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.