ಉತ್ತರಪ್ರದೇಶದ ಗಾಜಿಯಾಬಾದ್ನ ಹೊರವಲಯದಲ್ಲಿರುವ ಲೋನಿ ಪಟ್ಟಣವು ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಸ್ವಿಡ್ಜರ್ಲೆಂಡ್ನ ಐಕ್ಯೂಏರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಸ್ವಿಡ್ಜರ್ಲೆಂಡ್ ಐಕ್ಯೂಏರ್ ಸಂಸ್ಥೆಯು ಒಟ್ಟು 143 ದೇಶಗಳ 9,446 ನಗರಗಳ ಹವಾಮಾನವನ್ನು ಅಧ್ಯಯನ ನಡೆಸಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ವಿಶ್ವ ವಾಯು ಗುಣಮಟ್ಟ ವರದಿ ಪ್ರಕಾರ ಅತೀ ಕಲುಷಿತ ಹವಾಮಾನವನ್ನು ಪಾಕಿಸ್ತಾನ ಹೊಂದಿದೆ.

ವರದಿ ಪ್ರಕಾರ 2025ನೇ ಸಾಲಿನ ವಿಶ್ವದ ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ. 2024ರ ಅಂಕಿ ಅಂಶದ ಅನ್ವಯ ಭಾರತ 5ನೇ ಸ್ಥಾನದಲ್ಲಿತ್ತು. ಒಂದು ವರ್ಷದಲ್ಲಿ ಕೇವಲ ಒಂದು ಸ್ಥಾನದಷ್ಟು ಸುಧಾರಣೆ ಕಂಡಿದೆ.

ಭಾರತದ 5 ನಗರಗಳು ಹೆಚ್ಚು ಕಲುಷಿತ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿವೆ. ವಿಶ್ವದ ಅತ್ಯಂತ ಕಲುಷಿತ ನಗರ ಭಾರತದಲ್ಲಿದೆ. ಇದರ ಜತೆಗೆ ಬೈರ್ನಿಹತ್ ನಗರ 3ನೇ ಸ್ಥಾನದಲ್ಲಿದೆ. ದಿಲ್ಲಿ 4ನೇ ಸ್ಥಾನ, ಗಾಜಿಯಾಬಾದ್ 7ನೇ ಸ್ಥಾನ ಹಾಗೂ ಉಲಾ 10ನೇ ಸ್ಥಾನದಲ್ಲಿವೆ.

ದೇಶದ ಲೋನಿ ನಗರವು ಪ್ರತಿ ಘನ ಮೀಟರ್ಗೆ 112.5 ಮೈಕ್ರೋಗ್ರಾಂ ಧೂಳಿನ ಕಣಗಳನ್ನು ಹೊಂದಿವೆ. ಇದು ವಿಶ್ವಸಂಸ್ಥೆ ಸುರಕ್ಷಿತ ಎಂದು ನಿಗದಿ ಪಡಿಸಿದ ಸುರಕ್ಷಿತ ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ವಿಶ್ವದ ಟಾಪ್ 25 ಅತ್ಯಂತ ಕಲುಷಿತ ನಗರಗಳು ಚೀನಾ, ಭಾರತ ಮತ್ತು ಪಾಕಿಸ್ತಾನದಲ್ಲಿವೆ ಎಂದು ವರದಿ ತಿಳಿಸಿದೆ.

2025ರಲ್ಲಿ ಯುರೋಪ್ ಮತ್ತು ಕೆನಡಾದಲ್ಲಿ ದಾಖಲೆಯ ಮಟ್ಟದ ಕಾಡ್ಗಿಚ್ಚು ಸಂಭವಿಸಿತು. ಇದರಿಂದ ಸುಮಾರು 1,380 ಮೆಗಾಟನ್ಗಳಷ್ಟು ಇಂಗಾಲ ಬಿಡುಗಡೆಯಾಗಿತ್ತು. ಇದು ಜಾಗತಿಕ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಹದಗೆಡಸಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಂತ ಕಲುಷಿತ ದೇಶಗಳು

ಪಾಕಿಸ್ತಾನ

ಬಾಂಗ್ಲಾದೇಶ:

ತಜಿಕಿಸ್ತಾನ್

ಚಾಡ್

ಕಾಂಗೋ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.