ನವದೆಹಲಿ: ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯ ವಿಚಾರವಾಗಿ ರಾಜಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಆರೋಪ–ಪ್ರತ್ಯಾರೋಪಗಳನ್ನು ಮಾಡಿದರು.

ರಾಜ್ಯಸಭೆ ಅಧಿವೇಶನದ ಶೂನ್ಯ ಅವಧಿಯಲ್ಲಿ ಈ ಬಗ್ಗೆ ಮಾತನಾಡಿದ ಖರ್ಗೆ ಅವರು, ‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಇಂಧನ ಪೂರೈಕೆಯಲ್ಲಿ ವತ್ಯಾಸವಾಗಬಹುದು ಎಂದು ಗೊತ್ತಿದ್ದರೂ ಕೇಂದ್ರ ಸರ್ಕಾರ ಎಲ್ಪಿಜಿ ಆಮದಿಗೆ ಪರ್ಯಾಯ ವ್ಯವಸ್ಥೆಯ ಕಲ್ಪಿಸಿಲ್ಲ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಹಾಗಾಗಿ ಇಂದಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ’ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ಜೆ.ಪಿ ನಡ್ಡಾ, ‘ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಜನರ ಜೊತೆ ನಿಲ್ಲುವ ಬದಲು ಅವರನ್ನು ಪ್ರಚೋದಿಸುತ್ತಿದೆ’ ಎಂದು ಅರೋಪಿಸಿದರು.

‘ಎಲ್ಪಿಜಿ ಪೂರೈಕೆ ವ್ಯತ್ಯಯದಿಂದಾಗಿ ಇಡೀ ದೇಶ ತೊಂದರೆಗೆ ಒಳಗಾಗಿದೆ. ಬಡ ಮತ್ತು ಮಧ್ಯಮವರ್ಗದ ಮನೆಗಳು, ರೆಸ್ಟೊರೆಂಟ್, ಹಾಸ್ಟೆಲ್ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಕೆಲವರು ಒಂದು ಸಿಲಿಂಡರ್ಗೆ ₹5 ಸಾವಿರ ಕೊಟ್ಟು ಖರೀದಿಸುತ್ತಿದ್ದಾರೆ’ ಎಂದು ಖರ್ಗೆ ಹೇಳಿದರು.

‘ಎಲ್ಪಿಜಿ ಕೊರತೆಯಿಲ್ಲ, ವದಂತಿಗಳನ್ನು ನಂಬಬೇಡಿ’ ಎಂದು ಕೇಂದ್ರ ಇಂಧನ ಸಚಿವರು ಲೋಕಸಭೆಯಲ್ಲಿ ಹೇಳಿದ್ದಾರೆ. ಆದರೆ ವಾಸ್ತವ ಸಂಗತಿಗಳು ಸರ್ಕಾರದ ಸುಳ್ಳನ್ನು ಸಾಕ್ಷೀಕರಿಸುತ್ತವೆ’ ಎಂದು ಆರೋಪಿಸಿದರು.

‘ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಗಳ ಬಗ್ಗೆ ಇರಾನ್ನಲ್ಲಿರುವ ಭಾರತೀಯರಿಗೆ ಕೆಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು. ಸರ್ಕಾರಕ್ಕೆ ಮುನ್ಸೂಚನೆ ಇದ್ದರೂ ಇಂಧನ ಪೂರೈಕೆ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಯಾಕೆ ಕೈಗೊಂಡಿಲ್ಲ’ ಎಂದು ಸರ್ಕಾರವನ್ನು ಪ್ರಶ್ನಿಸಿದರು.

‘ಎಲ್ಪಿಜಿ ಸಿಲಿಂಡರ್ ಸಂಗ್ರಹಿಸಿಟ್ಟಿದ್ದ ಕಾಂಗ್ರೆಸ್ ನಾಯಕರೊಬ್ಬರು ಸಿಕ್ಕಿಬಿದ್ದಿದ್ದಾರೆ. ಕಾಂಗ್ರೆಸ್ನವರು ಸಿಲಿಂಡರ್ ಸಂಗ್ರಹಿಸಿಡುತ್ತಾರೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಅವರು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಸಂಗತಿ’ ಎಂದು ನಡ್ಡಾ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.