ನವದೆಹಲಿ: ‘ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ಅಭಾವದಿಂದ ಸುಮಾರು 1 ಕೋಟಿ ಜನರು ನಿರುದ್ಯೋಗಿಗಳಾಗುವ ಸಾಧ್ಯತೆಯಿದೆ’ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ತೀವ್ರ ಕೊರತೆಯಿದೆ. ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳು ಈಗಾಗಲೇ ಅಭಾವವನ್ನು ಎದುರಿಸುತ್ತಿವೆ. ಮುಂದಿನ ಎರಡು ದಿನಗಳಲ್ಲಿ ಶೇ 50 ರಷ್ಟು ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಲಿವೆ ಎಂದು ದೆಹಲಿ ಮತ್ತು ಬಿಹಾರದಿಂದ ಸುದ್ದಿಗಳು ಬರುತ್ತಿವೆ’ ಎಂದು ಹೇಳಿದ್ದಾರೆ.

‘75 ವರ್ಷಗಳ ಕಾಲ ಭಾರತ ಪಾಲಿಸಿಕೊಂಡು ಬಂದಿದ್ದ ಅಲಿಪ್ತ ನೀತಿಯನ್ನು ಹಾಳುಗೆಡುವ ಮೂಲಕ ಪ್ರಧಾನಿ ಮೋದಿ ತಪ್ಪು ಮಾಡಿದ್ದಾರೆ. ನಾವು ಯಾರೊಂದಿಗೂ ಗುರುತಿಸಿಕೊಳ್ಳಬಾರದಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಯುದ್ಧ ಆರಂಭವಾಗುವ ಒಂದು ದಿನ ಮೊದಲು ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪರವಾಗಿ ನಿಂತರು. ಆ ಮೂಲಕ ಇರಾನ್ನನ್ನು ನಮ್ಮ ಶತ್ರುವನ್ನಾಗಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.