ಮಡಿಕೇರಿ: ‘ತಾವು ಯಾವ ಉದ್ದೇಶಕ್ಕೆ ಇಸ್ರೇಲ್ಗೆ ಹೋಗಿದ್ದರು ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಬೇಕು’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಒತ್ತಾಯಿಸಿದರು.

ಭಾರತಕ್ಕೆ ಇಸ್ರೇಲ್ನಿಂದ ಯಾವುದೇ ಪ್ರಯೋಜನ ಇಲ್ಲ. ಪಂಡಿತ್ ಜವಾಹರಲಾಲ ನೆಹರೂ ಅವರ ಮುಂದಾಲೋಚನೆಯಿಂದ ಅಂತರರಾಷ್ಟ್ರೀಯ ಸಂಬಂಧಗಳು ಏರ್ಪಟ್ಟಿದ್ದವು. ಆದರೆ, ಅವುಗಳನ್ನು ಈಗ ಹಾಳು ಮಾಡಲಾಗಿದೆ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗ ಭಾರತ ಯುದ್ದ ಬೇಡ ಎಂದು ಹೇಳಬೇಕಿತ್ತು. ಆದರೆ, ಅದನ್ನು ಮಾಡದೇ ತೈಲ ಖರೀದಿಸಿತು. ನಂತರ, ಅಮೆರಿಕ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದರೆ ಆಯಿತು ಎಂದರು. ಈಗ 30 ದಿನಗಳ ಮಟ್ಟಿಗೆ ಖರೀದಿಸಿ ಎಂದರೆ ಅದಕ್ಕೂ ಸರಿ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

1953ರಿಂದಲೆ ಇರಾನ್ ಜೊತೆ ಭಾರತದ ಒಪ್ಪಂದ ಇದೆ. ನೆಹರೂ ಅವರ ಗದೂರದರ್ಶಿತ್ವದ ಫಲದಿಂದ ವಿದೇಶದೊಂದಿಗೆ ಉತ್ತಮ ಸಂಬಂಧ ಏರ್ಪಟ್ಟಿತ್ತು. ಆದರೆ, ಈಗ ಅಡುಗೆ ಅನಿಲದ ಕೊರತೆಯಾಗಿದೆ. ವಿದೇಶಗಳೊಂದಿಗೆ ಸಂಬಂಧ ಹೇಗಿದೆ ಎಂಬುದನ್ನು ಜನರೇ ಪ್ರಶ್ನಿಸಬೇಕಿದೆ ಎಂದರು.

ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಡಾಲರ್ ಎದುರು ರೂಪಾಯಿ ಮೌಲ್ಯ ಹೇಗಿತ್ತು, ಚಿನ್ನದ ಧಾರಣೆ ಎಷ್ಟಿತ್ತು, ಪೆಟ್ರೋಲ್ ಬೆಲೆಗಳು ಹೇಗಿದ್ದವು ಈಗ ಹೇಗಾಗಿದೆ ಎಂಬುದನ್ನು ಹೋಲಿಸಿ ನೋಡಿದರೆ ಸಾಕು. ಇದನ್ನೆಲ್ಲ ಹೇಳಿದರೆ ನಾವು ದೇಶ ವಿರೋಧಿಗಳು ಎಂದು ಆರೋಪಿಸುತ್ತಾರೆ. ಯಾರೂ ಏನನ್ನೂ ಕೇಳುವಂತಿಲ್ಲ ಎಂದು ಹರಿಹಾಯ್ದರು.

‘ನಾವು ಇಂತಹ ಸ್ಥಿತಿಯಲ್ಲಿ ಇರಾನ್, ರಷ್ಯ ಜೊತೆ ಸಂಬಂಧ ಗಟ್ಟಿಗೊಳಿಸಿಕೊಂಡು ಅಮೆರಿಕಾದ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಬೇಕಿತ್ತು. ಇದು ನಿಜವಾದ ಭಾರತ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-51-983227717

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.