ಮಡಿಕೇರಿ: ‘ಕಾಂಗ್ರೆಸ್ ಹಾಗೂ ಅದರ ಮೈತ್ರಿಕೂಟದ ವಿರೋಧದಿಂದ ಮಹಿಳಾ ಮೀಸಲಾತಿ ಮತ್ತು ನಮ್ಮ ರಾಜ್ಯ ಸಂಸತ್ ಸ್ಥಾನ ಏರಿಕೆಯಂತಹ ಸುವರ್ಣಾಕಾಶಗಳನ್ನು ಕಳೆದುಕೊಂಡಿತು. ಮಹಿಳೆಯರು ಮತ್ತು ರಾಜ್ಯದ ಹಿತಕ್ಕಾಗಿ ಕೇಂದ್ರ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಲಿದೆ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

‘ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ಕೊಡುವುದು ಹಾಗೂ ರಾಜ್ಯವೂ ಸೇರಿದಂತೆ ದೇಶದ ಸಂಸತ್ ಸದಸ್ಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಸಾಂವಿಧಾನಿಕ ತಿದ್ದುಪಡಿಯಂತಹ ಮಸೂದೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಹಾಗೂ ರಾಜ್ಯದ ಸಂಸತ್ ಸದಸ್ಯ ಸ್ಥಾನ ಹೆಚ್ಚಿಸುವ ಉದ್ದೇಶಗಳು ಈಡೇರಲಿಲ್ಲ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಅನೇಕ ಮಹಿಳೆ ಯರು, ಈ ನಾಡಿಗೆ, ಈ ದೇಶಕ್ಕೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ. ಆಧುನಿಕ ರಾಜಕೀಯ ಚೌಕಟ್ಟಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕಾಗಿತ್ತು. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್ ಬೆಂಬಲ ಕೊಡದಿದ್ದರಿಂದ ಅವು ಜಾರಿಗೆ ಬರಲು ಆಗಲಿಲ್ಲ’ ಎಂದರು.

‘ಭಾರತದ ನಾಯಕತ್ವಕ್ಕೆ ಮಹಿಳೆಯರೂ ಮುಖ್ಯ. ನೀತಿ ನಿರೂಪಣೆಯಲ್ಲಿ ಅವರು ಇರಬೇಕು. ಹಾಗಾಗಿಯೇ, ಇಂತಹದ್ದೊಂದು ಮಸೂದೆಯನ್ನು ತರಲಾಗಿತ್ತು. ಆದರೆ, ಕಾಂಗ್ರೆಸ್ ಬೆಂಬಲ ಕೊಡದೇ ಇರುವ ಮೂಲಕ ಮಹಿಳೆಯರಿಗೆ ಮೀಸಲಾತಿ ದೊರೆಯದಂತೆ ಮಾಡಿತು’ ಎಂದು ದೂರಿದರು.

‘ನರೇಂದ್ರ ಮೋದಿ ಅವರು ಈ ಮಸೂದೆಗಳು ಜಾರಿಯಾದಲ್ಲಿ ಅದರಲ್ಲಿ ನನ್ನ ಚಿತ್ರ ಬೇಡವೇ ಬೇಡ. ವಿರೋಧ ಪಕ್ಷಗಳ ನಾಯಕರ ಚಿತ್ರಗಳನ್ನೇ ಹಾಕುತ್ತೇವೆ ಎಂದರು. ಮಾತ್ರವಲ್ಲ, ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಆದರೂ, ಕಾಂಗ್ರೆಸ್ ಬೆಂಬಲ ಕೊಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಸತ್ ಸದಸ್ಯ ಸ್ಥಾನದ ಏರಿಕೆಯಂತಹ ಮಸೂದೆಯಲ್ಲಿ ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಂಸತ್ ಸದಸ್ಯ ಸ್ಥಾನವೂ ಏರಿಕೆಯಾಗುತ್ತಿತ್ತು. ಕೊಡಗಿಗೆ ಪ್ರತ್ಯೇಕವಾದ ಸಂಸತ್ ಸದಸ್ಯ ಸ್ಥಾನವೂ ಸಿಗುವ ಅವಕಾಶ ಇತ್ತು. ಆದರೆ, ಕಾಂಗ್ರೆಸ್ ವಿರೋಧ ಮಾಡಿದ್ದರಿಂದ ಇಂತಹ ಸುವರ್ಣ ಅವಕಾಶಗಳು ಕೈತಪ್ಪಿ ಹೋದವು’ ಎಂದು ಆರೋಪಿಸಿದರು.

‘ಹೋಂಸ್ಟೇಯೊಂದರಲ್ಲಿ ನಡೆದಿದೆ ಎನ್ನಲಾದ ವಿದೇಶಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮದಿಂದಲೂ ತನಿಖೆ ನಡೆಯಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಗರಸಭೆ ಅಧ್ಯಕ್ಷೆ ಕಲಾವತಿ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ನಗರ ಘಟಕದ ಅಧ್ಯಕ್ಷ ಉಮೇಶ್ ಸುಬ್ರಮಣಿ, ಮುಖಂಡರಾದ ಯಮುನಾ ಚೆಂಗಪ್ಪ, ಜಗದೀಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-51-1605715506

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.