ಮುಂಬೈ: ಬಲವಂತ, ಮೋಸ, ಆಮಿಷ ಅಥವಾ ಮದುವೆಯ ಕಾರಣಕ್ಕಾಗಿ ಮತಾಂತರಗೊಳ್ಳುವುದಕ್ಕೆ ನಿರ್ಬಂಧ ಹೇರುವ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ–2026’ಕ್ಕೆ ಮಹಾರಾಷ್ಟ್ರ ವಿಧಾನಸಭೆ ಸೋಮವಾರ ರಾತ್ರಿ ಅಂಗೀಕಾರ ನೀಡಿದೆ.
.ಎಲ್ಪಿಜಿ ಬದಲಿಗೆ ಸೀಮೆಎಣ್ಣೆ ವಿತರಣೆಗೆ ಮಹಾರಾಷ್ಟ್ರ ಸರ್ಕಾರ ಚಿಂತನೆ.
ಮದುವೆಯ ಕಾರಣಕ್ಕೆ ಕಾನೂನು ಬಾಹಿರವಾಗಿ ಮತಾಂತರಕ್ಕೆ ಮುಂದಾದರೆ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸುವ ಪ್ರಸ್ತಾಪ ಕಾಯ್ದೆಯಲ್ಲಿದೆ.

ಅಪ್ರಾಪ್ತ ವಯಸ್ಸಿನ, ಮಾನಸಿಕ ಅಸ್ವಸ್ಥ, ಮಹಿಳೆ ಅಥವಾ ಎಸ್ಟಿ ಹಾಗೂ ಎಸ್ಸಿಗೆ ಸೇರಿದವರನ್ನು ಮತಾಂತರ ಮಾಡಿದರೆ ₹ 5 ಲಕ್ಷ ದಂಡ ವಿಧಿಸಲಾಗುತ್ತದೆ.

ಸಾಮೂಹಿಕ ಮತಾಂತರಕ್ಕೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 5 ಲಕ್ಷ ದಂಡ. ಅಪರಾಧ ಪುನರಾವರ್ತನೆಯಾದರೆ 10 ವರ್ಷ ಜೈಲು ಹಾಗೂ ₹ 5 ಲಕ್ಷ ದಂಡ ವಿಧಿಸುವ ಪ್ರಸ್ತಾಪ ಇದೆ.

‘ಇದು ಯಾವುದೇ ಧರ್ಮದ ವಿರುದ್ಧ ಅಲ್ಲ, ಬಲತ್ಕಾರದ, ಮೋಸದ ಹಾಗೂ ಆಮೀಷದ ಮತಾಂತರ ತಡೆಯಲು ಈ ಕಾನೂನು ತರಲಾಗುತ್ತಿದೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಸೂದೆ ಮೇಲಿನ ಚರ್ಚೆಯಲ್ಲಿ ಹೇಳಿದ್ದಾರೆ.
.ಪ್ರಾಣ ರಕ್ಷಣೆಗಾಗಿ ಚಿರತೆ ಹತ್ಯೆ ಮಾಡಿದರೆ ಕ್ರಮವಿಲ್ಲ: ಮಹಾರಾಷ್ಟ್ರ ಸರ್ಕಾರ.
ಒಡಿಶಾ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ ಹಾಗೂ ಜಾರ್ಖಂಡ್ನಲ್ಲಿ ಈಗಾಗಲೇ ಈ ಕಾನೂನು ಜಾರಿಯಲ್ಲಿದೆ ಎಂದೂ ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.

ಈ ಮಸೂದೆಯು ಸಂವಿಧಾನದ 25ನೇ ವಿಧಿಯಡಿ ದತ್ತವಾಗಿರುವ ಧರ್ಮವನ್ನು ಅನುಕರಿಸುವ ಹಕ್ಕಿಗೆ ಯಾವುದೇ ನಿರ್ಬಂಧ ಹೇರುವುದಿಲ್ಲ. ಧರ್ಮ ಪಾಲಿಸುವ ಹಕ್ಕಿನಲ್ಲಿ ಬಲವಂತದ ಮತಾಂತರ ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿ ಫಡಣವೀಸ್ ಹೇಳಿದ್ದಾರೆ.
.ಮಹಾರಾಷ್ಟ್ರ ಸದನದಲ್ಲಿ ಅವಾಚ್ಯ ಪದ ಬಳಕೆಗೆ 30 ದಿನ ಜೈಲು ಶಿಕ್ಷೆಗೆ ಶಿಫಾರಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.