ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ರೈತರಿಗಾಗಿ ಸಾಲ ಮನ್ನಾ ಯೋಜನೆಯನ್ನು ಘೋಷಿಸಿದ್ದು, 2025ರ ಸೆಪ್ಟೆಂಬರ್ 30ರವರೆಗೆ ಪಡೆದ ₹2 ಲಕ್ಷಗಳವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಾವು ಮಂಡಿಸಿದ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ರೈತರಿಗಾಗಿ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೊಲ್ಕರ್ ಶಟ್ಕಾರಿ ಕರ್ಜ್ಮಾಫಿ ಯೋಜನೆ ಘೋಷಿಸಿರುವ ಫಡಣವೀಸ್, ಸಾಲವನ್ನು ನಿಯಮಿತವಾಗಿ ಮರುಪಾವತಿ ಮಾಡುವ ರೈತರಿಗೆ ₹50,000 ಸಹಾಯಧನ ಸಿಗಲಿದೆ ಎಂದೂ ಹೇಳಿದ್ದಾರೆ.

ಮಹಿಳೆಯರಿಗೆಂದು ಇರುವ ‘ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್’ ಯೋಜನೆಯಡಿಯಲ್ಲಿ ಧನ ಸಹಾಯವನ್ನು ಮುಂದುವರೆಸಲಾಗುವುದು ಎಂದು ಫಡಣವೀಸ್ ತಿಳಿಸಿದರು. ಸಾವಿರ ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ರ್ಟದ ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದೂ ಹೇಳಿದ್ದಾರೆ.

ವಿಮಾನ ಅಪಘಾತದಲ್ಲಿ ನಿಧನರಾದ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಫಡಣವೀಸ್ ಸ್ಮರಿಸಿದರು. ಅವರ ಸ್ಮಾರಕನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬಜೆಟ್ ಮಂಡಿಸಲು ಫಡಣವೀಸ್ ಎದ್ದು ನಿಂತಾಗ ವಿಧಾನಸಭೆಯಲ್ಲಿ ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಸದನದ ಸದಸ್ಯರು ‘ಅಜಿತ್ ದಾದಾ ಅಮರ್ ರಹೇ’ ಎಂಬ ಘೋಷಣೆಯನ್ನು ಕೂಗುವ ಮೂಲಕ ದಿವಂಗತ ನಾಯಕನಿಗೆ ಗೌರವ ಸಲ್ಲಿಸಿದರು.

ಪವಾರ್ ಅವರ ನಿಧನದ ನಂತರ, ಫಡಣವೀಸ್ ಅವರು ಹಣಕಾಸು ಖಾತೆಯನ್ನು ತಾವೇ ಉಳಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.