ಲಾತೂರ್: ಲಾತೂರ್ ಮಹಾನಗರ ಪಾಲಿಕೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಒಟ್ಟು 70 ಸ್ಥಾನಗಳಲ್ಲಿ 43ರಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 22 ಸ್ಥಾನಗಳನ್ನು, ವಂಚಿತ್ ಬಹುಜನ ಅಘಾಡಿ 4 ಸ್ಥಾನ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ 1 ಸ್ಥಾನ ಗೆದ್ದುಕೊಂಡಿದೆ.

ಚುನಾವಣೆಗೂ ಮುನ್ನ, ಮಾಜಿ ಮುಖ್ಯಮಂತ್ರಿ ವಿಲಾಸ್ರಾವ್ ದೇಶಮುಖ್ ಅವರ ಹೆಸರು ಮತ್ತು ನೆನಪುಗಳನ್ನು ಅವರ ತವರೂರಾದ ಲಾತೂರ್ನಿಂದ ಅಳಿಸಿ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಚೌವಾಣ್ ಹೇಳಿದ್ದರು. ಆದರೆ, ಫಲಿತಾಂಶವು ಬಿಜೆಪಿಗೆ ತೀವ್ರ ಮುಖಭಂಗ ತಂದಿದೆ. ರವೀಂದ್ರ ಚೌವಾಣ್ ಅವರ ಹೇಳಿಕೆ ವಿವಾದವೇ ಬಿಜೆಪಿಗೆ ಮುಳುವಾಗಿದೆ ಎಂದು ಚುನಾವಣಾ ತಜ್ಞರು ವಿಶ್ಲೇಷಿಸಿದ್ದಾರೆ.

2017ರಲ್ಲಿ ನಡೆದ ಚುನಾವಣೆಯಲ್ಲಿ ಲಾತೂರ್ನಲ್ಲಿ ಬಿಜೆಪಿ 36 ಸ್ಥಾನಗಳನ್ನು, ಕಾಂಗ್ರೆಸ್ 33 ಸ್ಥಾನಗಳನ್ನು ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.