ಮುಂಬೈ: ಆರ್ಥಿಕತೆಯ ವಿಷಯದಲ್ಲಿ ನಾವು ದೇಶದ ಬೇರೆ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಇನ್ನೂ ಎರಡು–ಮೂರು ವರ್ಷಗಳಲ್ಲಿ ಸಿಂಗಾಪುರ, ಯುಎಇ ದೇಶಗಳ ಆರ್ಥಿಕತೆಯನ್ನು ಮೀರಿಸಲಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ಮಹಾರಾಷ್ಟ್ರವು 660 ಬಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ್ದು, ನಾವು ಈಗಾಗಲೇ ಜಗತ್ತಿನ 30ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. 2030ರೊಳಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲಿದ್ದೇವೆ ಎಂದು ಹೇಳಿದ್ದಾರೆ.

2015ರಲ್ಲಿ ರಾಜ್ಯದ ಆರ್ಥಿಕತೆಯು ₹14 ಲಕ್ಷ ಕೋಟಿಯಿತ್ತು, ಇಂದು ₹54 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ, ಕಳೆದ ಒಂದು ದಶಕದಲ್ಲಿ ರಾಜ್ಯದ ಆರ್ಥಿಕತೆಯು ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ, ನವೋದ್ಯಮಗಳು, ಹೊಸ ಸಂಶೋಧನೆಗಳು ಮತ್ತು ಮೂಲ ಸೌಕರ್ಯಗಳಲ್ಲಿ ತ್ವರಿತ ಬೆಳವಣಿಗೆ ಕಾಣುತ್ತಿದ್ದು, ಇದು ಆರ್ಥಿಕತೆಗೆ ಸಹಾಯ ಮಾಡಲಿದೆ. ಭಾರತದ ನವೋದ್ಯಮ ಮತ್ತು ಯುನಿಕಾರ್ನ್ ರಾಜಧಾನಿಯಾಗಿ ಗುರುತಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಪ್ರತ್ಯೇಕ ಎಐ ವಿಭಾಗವನ್ನು ಆರಂಭಿಸಿದೆ. ಕೃಷಿಯ ಮಾಹಿತಿಗಾಗಿ ಎಐ ಅನ್ನು ಬಳಸಿಕೊಳ್ಳುವ ಉದ್ದೇಶದಿಂದ 'ಮಹಾವಿಸ್ತಾರ್' ಆ್ಯಪ್ ಪ್ರಾರಂಭಿಸಲಾಗಿದ್ದು, ಇದುವರೆಗೂ 50 ಲಕ್ಷಕ್ಕೂ ಅಧಿಕ ರೈತರು ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸ್ಥಳೀಯ ಭಾಷೆಗಳಲ್ಲಿ ಕೂಡ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.