ತಿರುವನಂತಪುರಂ: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಸಿ) ಅಧ್ಯಕ್ಷರನ್ನಾಗಿ ಮಲಯಾಳಂ ನಟ ಹಾಗೂ ಕೇರಳ ಬಿಜೆಪಿ ನಾಯಕ ಜಿ. ಕೃಷ್ಣಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಇಂದು ಕೇರಳ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ನಿನ್ನೆ ಸಂಜೆ ಜಿ.ಕೃಷ್ಣಕುಮಾರ್ ಅವರ ನೇಮಕದ ಆದೇಶ ಹೊರಬಿದ್ದಿದೆ.

2021 ರಲ್ಲಿ ಜಿ.ಕೃಷ್ಣಕುಮಾರ್ ಅವರು ಬಿಜೆಪಿ ಸೇರ್ಪಡೆ ಆಗಿ ಅದೇ ವರ್ಷ ತಿರುವನಂತಪುರ ವಿಧಾನಸಭೆ ಚುನಾವಣೆಗೆ ಹಾಗೂ 2024 ರಲ್ಲಿ ಕೊಲ್ಲಂ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.

ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ದೂರದರ್ಶನ ವಾಹಿನಿಯಲ್ಲಿ ವಾರ್ತಾ ವಾಚಕರಾಗಿದ್ದರು.

ಜಿ.ಕೃಷ್ಣಕುಮಾರ್ ಅವರ ಅಧಿಕಾರವಧಿ ಮೂರು ವರ್ಷದ್ದಾಗಿರುತ್ತದೆ ಎಂದು ಪ್ರಸಾರ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಈ ಸಾರಿಯ ಚುನಾವಣೆಯಲ್ಲಿ ಕೃಷ್ಣಕುಮಾರ್ ಅವರು ಸ್ಪರ್ಧಿಸುತ್ತಿಲ್ಲ.
.ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಜಯ: ಧನ್ಯವಾದ ಸಲ್ಲಿಸಿದ ಮೋದಿ.ಕೇರಳ ಚುನಾವಣೆಯಲ್ಲಿ ಎಎಪಿ ಮಹಿಳಾ ಅಭ್ಯರ್ಥಿಗಳ ಕಮಾಲ್: ಇಲ್ಲಿದೆ ವಿವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.