ಕೋಲ್ಕತ್ತ: ಮಾಲ್ಡಾ ಜಿಲ್ಲೆಯಲ್ಲಿ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಕೂಡಿಹಾಕಿದ ಪ್ರಕರಣದ ಪ್ರಮುಖ ‘ಸೂತ್ರಧಾರ’ ಸೇರಿದಂತೆ ಇಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ಸಿಲಿಗುರಿಯ ಬಾಗ್ಡೊಗ್ರಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಮೊಫಕ್ಕರುಲ್ ಇಸ್ಲಾಂ ಎಂಬ ವಕೀಲನನ್ನು ವಿಮಾನ ಏರಲು ಮುಂದಾಗಿದ್ದಾಗ ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮೊಫಕ್ಕರುಲ್ ಬುಧವಾರ ರಾತ್ರಿ ಕಾಲಿಯಾಚಕ್ ತಾಲ್ಲೂಕು ಕಚೇರಿಯೊಳಗೆ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಹಲವು ಗಂಟೆ ಘೇರಾವ್ ಮಾಡಿದ ಘಟನೆಯ ಹಿಂದಿನ ಶಂಕಿತ ಸೂತ್ರಧಾರ ಆಗಿದ್ದಾನೆ. ಆತ ವಿಮಾನದ ಮೂಲಕ ರಾಜ್ಯದಿಂದ ಪಲಾಯನ ಮಾಡಲು ಮುಂದಾಗಿದ್ದ’ ಎಂದು ಹೇಳಿದ್ದಾರೆ.

‘ಉತ್ತರ ದಿನಾಜ್ಪುರ ಜಿಲ್ಲೆಯ ಇತಾಹರ್ ನಿವಾಸಿಯಾಗಿರುವ ಮೊಫಕ್ಕರುಲ್, ಪ್ರಸ್ತುತ ಕೋಲ್ಕತ್ತದಲ್ಲಿ ನೆಲಸಿದ್ದಾನೆ’ ಎಂದು ಎಡಿಜಿ (ಉತ್ತರ ಬಂಗಾಳ) ಕೆ.ಜಯರಾಮನ್ ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಭಾಷಣದ ಮೂಲಕ ಸ್ಥಳೀಯರನ್ನು ‘ಪ್ರಚೋದನೆ’ ಮಾಡಿದ ಆರೋಪದ ಮೇಲೆ ಆತನ ವಿರುದ್ಧ ಕಲಿಯಾಚಕ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಚೋದನಕಾರಿ ಭಾಷಣದ ಬೆನ್ನಲ್ಲೇ ಜನರ ಗುಂಪು ನ್ಯಾಯಾಂಗದ ಅಧಿಕಾರಿಗಳನ್ನು ಫೇರಾವ್ ಮಾಡಿದೆ ಎಂದಿದ್ದಾರೆ.

‘ಘಟನೆಯ ಬೆನ್ನಲ್ಲೇ ನಾವು ಮೊಫಕ್ಕರುಲ್ ಇಸ್ಲಾಂನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆವು. ಪಶ್ಚಿಮ ಬಂಗಾಳದ ಸಿಐಡಿ ಮತ್ತು ಸಿಲಿಗುರಿ ಪೊಲೀಸರ ಸಹಾಯದಿಂದ ಆತ ಮತ್ತು ಸಹಚರನನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದರೂ, ಈ ಘಟನೆಯು ‘ಪೂರ್ವಯೋಜಿತವೇ’ ಮತ್ತು ಇದರ ಹಿಂದೆ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪಶ್ಚಿಮ ಬಂಗಾಳ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸುವರು ಎಂದಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಕೂಡಿಹಾಕಿದ ಘಟನೆ ಮಾಲ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಿಷ್ಕ್ರಿಯತೆ ತೋರಿದ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.