ಕೋಲ್ಕತ್ತ: ಮತ ಎಣಿಕೆ ಪ್ರಕ್ರಿಯೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಎಚ್ಚರಿಕೆ ನೀಡಿದ್ದಾರೆ.

ಏ. 29ರ ಎರಡನೇ ಹಂತದ ಮತದಾನದಲ್ಲಿ ಬಳಸಲಾದ ಇವಿಎಂ ಸ್ಟ್ರಾಂಗ್ ರೂಮ್ ಇರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಎಣಿಕೆ ಕೇಂದ್ರಕ್ಕೆ ಗುರುವಾರ ಸಂಜೆ ಬ್ಯಾನರ್ಜಿ ಆಗಮಿಸಿದ್ದರು. ನಂತರ ಮಾತನಾಡಿದ ಅವರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುವ ಸಾಧ್ಯತೆಯಿದೆ, ಯಂತ್ರಗಳನ್ನು ಹಾಳುಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೋಲ್ಕತ್ತದ ಸಖಾವತ್ ಸ್ಮಾರಕ ಶಾಲೆಯಲ್ಲಿ ಇರಿಸಲಾಗಿರುವ ಭವಾನಿಪುರ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಕಳೆದು, ನಂತರ ಗುರುವಾರ ಮಧ್ಯರಾತ್ರಿ 12:07ರ ಸುಮಾರಿಗೆ ಹೊರಬಂದ ಬ್ಯಾನರ್ಜಿ, ಗೊತ್ತುಪಡಿಸಿದ ಮತ ಎಣಿಕೆ ಪ್ರದೇಶದೊಳಗೆ ತೆರಳಲು ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಭ್ಯರ್ಥಿ ಅಥವಾ ಒಬ್ಬ ಏಜೆಂಟ್ ಮಾತ್ರ ಅಲ್ಲಿರಬಹುದು. ಮಾಧ್ಯಮಗಳಿಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆಯೂ ನಾನು ಸೂಚಿಸಿದ್ದೇನೆ ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕೆಲವು ದೂರುಗಳು ಬಂದ ನಂತರ ಜನರ ಮತಗಳನ್ನು ರಕ್ಷಿಸುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಕೇಂದ್ರ ಪಡೆಗಳು ಆರಂಭದಲ್ಲಿ ನನ್ನನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ. ಮೇ 4ರಂದು ನಡೆಯುವ ಮತ ಎಣಿಕೆಗೆ ಮುನ್ನ, ಎಣಿಕೆ ಪ್ರಕ್ರಿಯೆಯನ್ನು ಹಾಳುಮಾಡಲು ಯಾವುದೇ ಯೋಜನೆ ಇದ್ದರೆ ಅದನ್ನು ಸಹಿಸಲಾಗುವುದಿಲ್ಲ ಎಂದರು.

ಇತ್ತೀಚೆಗೆ ವಿಡಿಯೊ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಿಜೆಪಿಯು ಇವಿಎಂನಿಂದ ಮತ ಕದಿಯುವ ಸಾಧ್ಯತೆಯಿದೆ. ಹಾಗಾಗಿ, ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಮತಗಟ್ಟೆ ಏಜೆಂಟ್ಗಳಿಗೆ ಇವಿಎಂ ಸ್ಟ್ರಾಂಗ್ ರೂಮ್ಗಳ ಮೇಲೆ 24 ಗಂಟೆಗಳೂ ನಿಗಾ ಇಡುವಂತೆ ಒತ್ತಾಯಿಸಿದ್ದರು.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಏ.23 ಹಾಗೂ ಏ. 29ರಂದು ಎರಡು ಹಂತದಲ್ಲಿ ಮತದಾನವಾಗಿತ್ತು. ಮೇ 4ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.