ಕೋಲ್ಕತ್ತಾ: ‘ಮಹಿಳಾ ಮೀಸಲು ಮಸೂದೆಯನ್ನು ಪ್ರಧಾನಿ ದೇಶವನ್ನು ದಾರಿ ತಪ್ಪಿಸಲು ಆಯ್ಕೆ ಮಾಡಿಕೊಂಡಿದ್ದು ತೀವ್ರ ದುರದೃಷ್ಟಕರ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

‘ಮಹಿಳಾ ಮೀಸಲಾತಿ ಕಾನೂನು ಜಾರಿ ಹೆಸರಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರ ಮಹಿಳೆಯರನ್ನು ಗುರಾಣಿಯಂತೆ ಬಳಸಿದೆ’ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಸೂದೆಗೆ ಸೋಲಾಗುತ್ತಿದ್ದಂತೆ ವಾಗ್ದಾಳಿ ನಡೆಸಿದ್ದ ಪ್ರಧಾನಿ, ’ಭ್ರೂಣಹತ್ಯೆಯ ಪಾಪ’ಕ್ಕಾಗಿ ದೇಶದ ಮಹಿಳೆಯರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳನ್ನು ಕಠಿಣವಾಗಿ ಶಿಕ್ಷಿಸಲಿದ್ದಾರೆ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಮಮತಾ, ‘ ‘ತೃಣಮೂಲ ಕಾಂಗ್ರೆಸ್ ಯಾವತ್ತೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುತ್ತಾ ಬಂದಿದೆ. ಲೋಕಸಭೆಯಲ್ಲಿ ಟಿಎಂಸಿ ಸದಸ್ಯರಲ್ಲಿ ಮಹಿಳೆಯರು ಶೇ 37.9ರಷ್ಟಿದ್ದರೆ, ರಾಜ್ಯಸಭೆಯಲ್ಲಿ ಶೇ 46ರಷ್ಟಿದ್ದಾರೆ. ಬಿಜೆಪಿಯು ತನ್ನ ಸ್ಥಾಪಿತ ರಾಜಕೀಯ ಕಾರ್ಯಸೂಚಿಗೆ ಗುರಾಣಿಯಾಗಿ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
.ಕ್ಷೇತ್ರ ಮರುವಿಂಗಡಣೆ ಚಿತಾವಣಿಯಲ್ಲಿ ಮಹಿಳಾ ಮೀಸಲು ಕಾನೂನಿಗೆ ತಿದ್ದುಪಡಿ: ಮಮತಾ.ಟಿಎಂಸಿ ಸೋಲಿಸಲು ಬಿಜೆಪಿಯಿಂದ ₹1000 ಕೋಟಿ ಒಳಒಪ್ಪಂದ: ಮಮತಾ ಬ್ಯಾನರ್ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.