ಬಹರಿಚ್: ಮಾಜಿ ಪತ್ನಿಯನ್ನು ಬೈಕ್ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಕೊಲೆ ಮಾಡಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಬಹರಿಚ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
.ಉತ್ತರ ಪ್ರದೇಶ: ಸಮಾಜಕ್ಕೆ ಹೆದರಿ ಮಗಳ ಅಪಹರಣದ ಸುದ್ದಿಯನ್ನೇ ಮುಚ್ಚಿಟ್ಟ ತಂದೆ ! .
ನನ್ಪಾರ ಕೊತ್ವಾಲಿ ಪ್ರದೇಶದಲ್ಲಿ ಘಟನೆ ಜರುಗಿದ್ದು, ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮಗಾಂವ್ ಪ್ರದೇಶದ ಮುಸಲ್ಲಂಪುರ ಗ್ರಾಮದ ನಿವಾಸಿ ರಹೀಸ್ ಆರೋಪಿ. ಆತ ಒಂದು ವರ್ಷದ ಹಿಂದೆ ನನ್ಪಾರದ ರೇಷ್ಮಾ ಎಂಬುವವರನ್ನು ಮದುವೆಯಾಗಿದ್ದ. ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಇದೇ ಜನವರಿಯಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಆ ಬಳಿಕ ಮಹಿಳೆ ತನ್ನ ಪೋಷಕರೊಂದಿಗೆ ವಾಸವಾಗಿದ್ದರು.

ಆರೋಪಿ ಬುಧವಾರ ನನ್ಪಾರಕ್ಕೆ ಬಂದಿದ್ದು, ಮಾಜಿ ಪತ್ನಿ ಮನೆಗೆ ಮರುಳುತ್ತಿದ್ದ ವೇಳೆ ಲಕ್ಷ್ಮಣ್ಪುರ ಮತೇಹಿ ಎಂಬಲ್ಲಿ ಗಲಾಟೆ ಮಾಡಿದ್ದಾನೆ. ಅದು ಹಿಂಸಾಚಾರಕ್ಕೆ ತಿರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
.ಉತ್ತರ ಪ್ರದೇಶ| ಪ್ರಧಾನಿ ವಿರುದ್ಧ 'ಆಕ್ಷೇಪಾರ್ಹ' ವಿಡಿಯೊ ಪೋಸ್ಟ್: ವ್ಯಕ್ತಿ ಬಂಧನ.
ರಹೀಸ್ ಆಕೆಗೆ ಬೈಕ್ನಲ್ಲಿ ಡಿಕ್ಕಿ ಹೊಡೆದಿದ್ದು, ಬಳಿಕ ಆಕೆಯನ್ನು ಬೈಕ್ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಅರಚಾಟ ಕೇಳಿ ಸ್ಥಳೀಯರು ದೌಡಾಯಿಸಿ ರಕ್ಷಣೆ ಮಾಡಿದ್ದಾರೆ. ಅಲ್ಲಿದ್ದವರು ಆರೋಪಿಗೆ ಥಳಿಸಿದ್ದಾರೆ. ಇದರಿಂದ ಆತನೂ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಲೆ ಯತ್ನ, ಹಾನಿ ಉಂಟು ಮಾಡುವುದು ಸೇರಿ ಭಾರತೀಯ ನ್ಯಾಯ ಸಂಹಿತೆ ವಿವಿಧ ಕಲಂಗಳಡಿ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ಪಹುಪ್ ಸಿಂಗ್ ತಿಳಿಸಿದ್ದಾರೆ.
.ಉತ್ತರ ಪ್ರದೇಶ | ಸರ್ಕಾರಿ ಭೂಮಿಯಲ್ಲಿದ್ದ ಮಸೀದಿ ನೆಲಸಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.