ಚಂದ್ರಾಪುರ, ಮಹಾರಾಷ್ಟ್ರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಒಂದೇ ಏಟಿಗೆ ದಾಳಿ ಮಾಡಿ ನಾಲ್ವರು ಮಹಿಳೆಯನ್ನು ಕೊಂದಿದ್ದ ನರಭಕ್ಷಕ ಹುಲಿಯನ್ನು ಅಂತೂ ಸೆರೆ ಹಿಡಿಯಲಾಗಿದೆ.

ನರಭಕ್ಷಕ ಹುಲಿ ಸೆರೆಗೆ ಕಳೆದ ಗುರುವಾರದಿಂದ ಮಹಾರಾಷ್ಟ್ರ ಅರಣ್ಯ ಇಲಾಖೆ, ವಿಶೇಷ ಹುಲಿ ರಕ್ಷಣಾ ಪಡೆ (STPF) ಸೇರಿದಂತೆ ತಜ್ಞರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು.

ಇಂದು ಬೆಳಿಗ್ಗೆ 11ರ ಸುಮಾರು ಸಿಂಧೇವಾಡಿಯ ಅರಣ್ಯ ವಲಯ–1836ರಲ್ಲಿ ಹುಲಿಯನ್ನು ಸೆರೆ ಹಿಡಿಯಲಾಯಿತು. ಸದ್ಯ ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಪಶು ವೈದ್ಯಕೀಯ ಘಟಕದಲ್ಲಿ ತೀವ್ರ ನಿಗಾದಲ್ಲಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೆರೆಯಾಗಿರುವುದು ಹೆಣ್ಣು ಹುಲಿಯಾಗಿದ್ದು, ಟಿ–2 ಎಂದು ಹೆಸರಿಲಾಗಿದೆ.

ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಸಿಂಧೇವಾಡಿ ತಾಲ್ಲೂಕಿನ ಗುಂಜೇವಾಹಿ–ಪಾಪನ್ಪುರ್ ಅರಣ್ಯ ವ್ಯಾಪ್ತಿಯಲ್ಲಿ ಈ ಭೀಕರ ಹಾಗೂ ಅತ್ಯಪರೂಪದ ಘಟನೆ ನಡೆದಿತ್ತು.

ಗುಂಜೇವಾಹಿ ಗ್ರಾಮದ ಹತ್ತು ಮಹಿಳೆಯರು ಕಟ್ಟಿಗೆ ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದ್ದರಿಂದ ನಾಲ್ವರು ಮಹಿಳೆಯರು ಮೃತಪಟ್ಟಿದ್ದರು. ಕೆಲವರು ಗಾಯಗೊಂಡಿದ್ದರು.

ಮಾನವರ ಮೇಲೆ ಹುಲಿ ದಾಳಿ ನಡೆಯುವುದು ಅಪರೂಪವಾದರೂ ಜನರ ಗುಂಪಿನ ಮೇಲೆ ದಾಳಿ ಮಾಡಿ ಒಂದೇ ಏಟಿಗೆ ಹಲವರನ್ನು ಕೊಂದಿರುವುದು ಅತ್ಯಪರೂಪದ ಘಟನೆ ಎಂದು ದೇಶದ ಹುಲಿ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದರು.
.ಹುಲಿ ದಾಳಿ: ರಾಜ್ಯ ಸರ್ಕಾರದ ವೈಫಲ್ಯ; ನಿಖಿಲ್ ಕುಮಾರಸ್ವಾಮಿ .ಮಹಾರಾಷ್ಟ್ರ | ಹುಲಿ ದಾಳಿ: ನಾಲ್ವರು ಮಹಿಳೆಯರ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.