ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಪತ್ರೆಯ ಶುಲ್ಕ ಪಾವತಿಸಲು ಆಗದೇ ತನ್ನ ಮಗುವನ್ನೇ ಮಾರಾಟ ಮಾಡಿದ ತಂದೆ!

Published : 8 ಸೆಪ್ಟೆಂಬರ್ 2024, 3:23 IST
Last Updated : 8 ಸೆಪ್ಟೆಂಬರ್ 2024, 3:23 IST
ಫಾಲೋ ಮಾಡಿ
Comments

ಕುಶಿನಗರ(ಉತ್ತರ ಪ್ರದೇಶ): ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ತನ್ನ ಮೂರು ವರ್ಷದ ಮಗನನ್ನು ಮಾರಾಟ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬರ್ವಾಪಟ್ಟಿಯ ನಿವಾಸಿ ಹರೀಶ್ ಪಟೇಲ್ ಎಂದು ಗುರುತಿಸಲಾಗಿದೆ.

ಆರೋಪಿ ತನ್ನ ಪತ್ನಿಯನ್ನು ಆರನೇ ಮಗುವಿನ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಿಲಿಸಿದ್ದ. ಆದರೆ ಆಸ್ಪತ್ರೆಯ ಶುಲ್ಕವನ್ನು ಭರಿಸಲು ಆಗದ ಪಟೇಲ್, ತನ್ನ ಮೂರನೇ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದನು. ಈ ಮಾಹಿತಿ ಪಡೆದ ಪೊಲೀಸರು, ಪ್ರಕರಣದಲ್ಲಿ ಭಾಗಿಯಾದ ಮಗುವನ್ನು ದತ್ತು ಪಡೆದ ಪೋಷಕರು, ಆಸ್ಪತ್ರೆಯ ಸಹಾಯಕಿ, ನಕಲಿ ವೈದ್ಯೆ ತಾರಾ ಕುಶ್ವಾಹಾ ಸೇರಿ ಐವರನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಫಲರಾದ ಪೊಲೀಸ್‌ ಕಾನ್‌ಸ್ಟೆಬಲ್ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಮಗುವನ್ನು ಪೋಷಕರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT