ಮಂಗಳೂರು: ‘ಡೀಸೆಲ್, ಪೆಟ್ರೋಲ್ ಮಿತವಾಗಿ ಬಳಸಿ ಎಂದು ಜನರಿಗೆ ಬುದ್ಧಿ ಹೇಳುವ ಪ್ರಧಾನಿ ನರೇಂದ್ರ ಮೋದಿ ಮಾತ್ರ ಸದಾ ವಿದೇಶ ಸುತ್ತುತ್ತಾರೆ. ಬೇರೆಲ್ಲ ತ್ಯಾಗ ಮಾಡಿ ಎಂದು ಜನರಿಗೆ ಅವರು ಉಪದೇಶ ಮಾಡಬೇಕಾಗಿಲ್ಲ. ಅವರು ಅಧಿಕಾರ ತ್ಯಜಿಸಿದರೆ ಜನರಿಗೆ ನೆಮ್ಮದಿ ತನ್ನಿಂದ ತಾನೆ ಸಿಗುತ್ತದೆ’ ಎಂದು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಡುಗೆ ಅನಿಲ ಸಬ್ಸಿಡಿ ತ್ಯಜಿಸಿ ಎಂದು ಪ್ರಧಾನಿ ಹೇಳಿದಾಗ ಜನ ಕೇಳಿದರು. ಅವರು ಪೆಟ್ರೋಲ್, ಡೀಸೆಲ್ ದರ ಏರಿಸಿದಾಗ, ನೋಟು ರದ್ದು ಮಾಡಿದಾಗ, ಲಾಕ್ಡೌನ್ ಮಾಡಿದಾಗ ಜನ ಸಹಿಸಿದರು. ಈಗ ಬಂಗಾರ ಖರೀದಿಸಬೇಡಿ ಎಂದು ಹೊಸ ವರಸೆ ಶುರು ಮಾಡಿದ್ದಾರೆ’ ಎಂದರು.

‘ಅಚ್ಛೆ ದಿನ್ ಬರುತ್ತದೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ವಿಕಸಿತ ಭಾರತ್ ಎಂದು ದಿನಕ್ಕೊಂದು ಘೋಷವಾಕ್ಯ ನೀಡುವ ಮೂಲಕ ಜನರನ್ನು ಬಿಜೆಪಿ ಮೋಸಗೊಳಿಸುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ವಾಣಿಜ್ಯ ಅಡುಗೆ ಅನಿಲ ದರವನ್ನು ಸಿಲಿಂಡರ್ ಗೆ ₹ 900 ಹೆಚ್ಚಿಸಿದರು. ತೈಲ ಕಂಪನಿಗಳು ಎಷ್ಟು ನಷ್ಟ ಭರಿಸಲು ಸಾಧ್ಯ ಎಂದು ಕೇಂದ್ರ ಇಂಧನ ಸಚಿವರು ಹೇಳಿಕೆ ನೀಡಿದ್ದಾರೆ. ಕಂಪನಿಗಳ ಭಾರವನ್ನು ಜನರ ಮೇಲೆ ಹಾಕುವುದರ ಮುನ್ಸೂಚನೆ ಇದು. ಕಾಂಗ್ರೆಸ್ ಬಡವರ ಬವಣೆಗೆ ಸ್ಪಂದಿಸಿದರೆ, ಬಿಜೆಪಿ ಬಡವರ ಜೇಬಿಗೆ ಕೈ ಹಾಕಿ ಶ್ರೀಮಂತರ ಜೇಬು ತುಂಬಿಸುತ್ತದೆ’ ಎಂದರು.

‘2020ರ ಬಳಿಕ ಎರಡು ಮೂರು ಸಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಈ ಪರೀಕ್ಷೆಯ ಪಾವಿತ್ರ್ಯ ಕಾಪಾಡುವಲ್ಲಿ ಕೇಂದ್ರ ವಿಫಲವಾಗಿದೆ. ರಾತ್ರಿ ಹಗಲು ತಯಾರಿ ನಡೆಸಿ ಪರೀಕ್ಷೆ ಬರೆದಿದ್ದ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಗದಾ ಪ್ರಹಾರ ಮಾಡಿದವರಿಗೆ ಯುವಜನತೆ ಪಾಠ ಕಲಿಸಲಿದ್ದಾರೆ’ ಎಂದರು.

ಮುಖಂಡರಾದ ಯೋಗೀಶ್, ಅಪ್ಪಿ, ಶುಭೋದಯ ಆಳ್ವ, ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಬೇಬಿ ಕುಂದರ್,ಜಯಶೀಲ ಅಡ್ಯಂತಾಯ, ಸುಹಾನ್ ಆಳ್ವ, ವಿಕಾಸ್ ಶೆಟ್ಟಿ, ಶಬ್ಬೀರ್ ಸಿದ್ಧಕಟ್ಟೆ, ನಜೀರ್ ಬಜಾಲ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-1022924412

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.