ಇಂಫಾಲ್: ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷ ಕಣವಾಗಿರುವ ಮಣಿಪುರದಲ್ಲಿ, ಎರಡು ದಿನಗಳಿಂದ ಕುಕಿ–ಝೊ ಮತ್ತು ನಾಗಾ ಬುಡಕಟ್ಟು ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದಿದೆ.

ಮೂವರು ಚರ್ಚ್ ಮುಖಂಡರ ಹತ್ಯೆ ಖಂಡಿಸಿ ಎರಡೂ ಸಮುದಾಯಗಳು ಮಣಿಪುರ ಬಂದ್ಗೆ ಕರೆ ನೀಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಕಾಂಗ್ಪೋಕ್ಪಿ, ಚುರಾಚಾಂದ್ಪುರ ಮತ್ತು ಚಂದೇಲ್ ಜಿಲ್ಲೆಗಳಲ್ಲಿ ಗುರುವಾರ ಶಾಲಾ–ಕಾಲೇಜುಗಳು, ಅಂಗಡಿಗಳು ತೆರೆದಿರಲಿಲ್ಲ. ಜನ, ವಾಹನ ಸಂಚಾರ ವಿರಳವಾಗಿತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಹೆಚ್ಚಿನ ಅಧಿಕಾರಿಗಳು ಗೈರುಹಾಜರಾಗಿದ್ದರು.

‘ಕುಕಿ ಮತ್ತು ನಾಗಾ ಸಮುದಾಯದ 38 ಜನರನ್ನು ಒತ್ತೆಯಾಳಾಗಿ ಇರಿಸಲಾಗಿದ್ದು, ಅವರ ಸುರಕ್ಷಿತ ಬಿಡುಗಡೆಗೆ ಅವಿರತ ಪ್ರಯತ್ನಗಳು ನಡೆದಿವೆ’ ಎಂದು ಗೃಹ ಸಚಿವ ಗೋವಿಂದಾಸ್ ಸಿಂಗ್ ಹೇಳಿದ್ದಾರೆ

‘ಒತ್ತೆಯಾಳುಗಳ ನಿಖರ ಸಂಖ್ಯೆ ತಿಳಿದಿಲ್ಲ, ಮಣಿಪುರದಲ್ಲಿ ಕುಕಿಗಳು, ನಾಗಾಗಳ ನಡುವಿನ ಉದ್ವಿಗ್ನತೆ ಕಡಿಮೆ ಮಾಡಿ, ಸಂಯಮ ಪಾಲಿಸಬೇಕು’ ಎಂದು ಕುಕಿ ಇನ್ಪಿ ಮಣಿಪುರ (ಕೆಐಎಂ) ಘಟಕದ ಮಾಹಿತಿ ಕಾರ್ಯದರ್ಶಿ ಜಂಗೋಲನ್ ಹಾಕಿಪ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾಗಾ ಸಮುದಾಯದ ಹಲವರನ್ನು ಕುಕಿ ಪ್ರಾಬಲ್ಯ ಇರುವ ಸೇನಾಪತಿ ಜಿಲ್ಲೆಯಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿದೆ’ ಎಂದು ಸಂಯುಕ್ತ ನಾಗಾ ಸಮಿತಿ (ಯುಎನ್ಸಿ) ಆರೋಪಿಸಿದೆ.

ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಬಂಡುಕೋರರು ಬುಧವಾರ ನಡೆಸಿದ ದಾಳಿಯಲ್ಲಿ ಕುಕಿ ಥಾಡೌ ಚರ್ಚ್ನ ಮೂವರು ಮುಖಂಡರು ಮೃತಪಟ್ಟಿದ್ದರು. ಥಾಡೊಸ್ ಜನರು ಕುಕಿ-ಝೊ ಸಮುದಾಯದ ಭಾಗವಾಗಿದ್ದಾರೆ.

48 ಗಂಟೆಗಳ ಬಂದ್ಗೆ ಕರೆ

ಘಟನೆಯನ್ನು ಖಂಡಿಸಿ 48 ಗಂಟೆಗಳ ಮಣಿಪುರ ಬಂದ್ಗೆ ಕುಕಿ ಸಮುದಾಯ ಕರೆ ನೀಡಿದೆ. ಗುರುವಾರ ಬೆಳಿಗ್ಗೆ ಪ್ರತಿಭಟನಕಾರರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು. ಇಂಫಾಲ್ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–2ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಚುರಾಚಾಂದ್ಪುರ ಜಿಲ್ಲೆಯಲ್ಲಿ ಝೋಮಿ ವಿದ್ಯಾರ್ಥಿ ಒಕ್ಕೂಟ ಅನಿರ್ದಿಷ್ಟಾವಧಿ ಬಂದ್ಗೆ ಕರೆ ನೀಡಿದೆ. ಚಂದೇಲ್ ಜಿಲ್ಲೆಯಲ್ಲಿ ನಾಗಾ ಸಮುದಾಯವು ಬಂದ್ಗೆ ಕರೆ ನೀಡಿದ್ದು, ಗುರುವಾರ ವ್ಯಾಪಾರ ವಹಿವಾಟು, ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು.

ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ 2023ರ ಮೇ ತಿಂಗಳಲ್ಲಿ ಆರಂಭಗೊಂಡ ಸಂಘರ್ಷವು ಇದುವರೆಗೆ 260 ಜನರನ್ನು ಬಲಿ ಪಡೆದಿದೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.

ಕೇಂದ್ರದ ಅಸಮರ್ಥತೆ:

ಕಾಂಗ್ರೆಸ್ ಆಕ್ಷೇಪ ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಂವಿಧಾನಿಕ ಅಧಿಕಾರ ಚಲಾಯಿಸಲು ಅಸಮರ್ಥ ಆಗಿರುವುದರಿಂದ ಮಣಿಪುರದಲ್ಲಿ ಪದೇ ಪದೇ ಹಿಂಸಾಚಾರ ಭುಗಿಲೇಳುತ್ತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಕೊಲೆಗಳನ್ನು ಕೇಂದ್ರ ಸರ್ಕಾರ ಇನ್ನೆಷ್ಟು ದಿನ ಮೂಕಪ್ರೇಕ್ಷನಂತೆ ನೋಡುತ್ತದೆ’ ಎಂದು ಕಾಂಗ್ರೆಸ್ನ ಮಣಿಪುರ ಘಟಕವು ಆಕ್ರೋಶ ವ್ಯಕ್ತಪಡಿಸಿದೆ. ‘ಒಂದೇ ದಿನದಲ್ಲಿ ಮಣಿಪುರದಲ್ಲಿ ಹಿಂಸಾಚಾರಕ್ಕೆ ನಾಲ್ವರು ಬಲಿಯಾಗಿದ್ದಾರೆ. ಇವರಲ್ಲಿ ಮೂವರು ಒಂದೇ ಸಮುದಾಯದವರು. ಒಬ್ಬರು ಬೇರೊಂದು ಸಮುದಾಯಕ್ಕೆ ಸೇರಿದವರು. ಇದು ಪ್ರತೀಕಾರದ ಕೃತ್ಯದಂತೆ ಕಾಣುತ್ತದೆ’ ಎಂದು ಕಾಂಗ್ರೆಸ್ನ ಮಣಿಪುರ ರಾಜ್ಯ ಘಟಕದ ಅಧ್ಯಕ್ಷ ಒ.ಇಬೊಬಿ ಸಿಂಗ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.