ಇಂಫಾಲ್: ಮಣಿಪುರದ ಉಖರುಲ್ ಜಿಲ್ಲೆಯಲ್ಲಿ, ಕುಕಿ ಸಮುದಾಯದ ಬಂಡುಕೋರರು ಹಾಗೂ ಗ್ರಾಮಸ್ಥರು ಸೆರೆ ಹಿಡಿದಿದ್ದ, ತಾಂಗಖುಲ್ ನಾಗಾ ಸಮುದಾಯದ 21 ಸದಸ್ಯರನ್ನು ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಮೂರು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ 21 ಮಂದಿಯನ್ನು, ಬಂಡುಕೋರರು ಹಾಗೂ ಗ್ರಾಮಸ್ಥರು ಶಾಂಗ್ಕೈನಲ್ಲಿ ಬುಧವಾರ ಮಧ್ಯಾಹ್ನ ಸೆರೆ ಹಿಡಿದಿದ್ದರು.

‘ರಾಜ್ಯ ಸರ್ಕಾರ, ಕುಕಿ ಹಾಗೂ ನಾಗಾ ಸಮುದಾಯಗಳ ಸಂಘಟನೆಗಳ ನಡುವಿನ ಮಾತುಕತೆ ಬಳಿಕ, ಗುರುವಾರ ಮುಂಜಾನೆ 4 ಗಂಟೆಗೆ 21 ಮಂದಿಯನ್ನೂ ಬಿಡುಗಡೆ ಮಾಡಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಂಗಖುಲ್ ನಾಗಾ ಜಿಲ್ಲೆಯಲ್ಲಿ, ಅದರಲ್ಲೂ ಕುಕಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಂಗ್ಪೋಕ್ಪಿ ಗಡಿಯಲ್ಲಿ, ಗುರುವಾರ ಮುಂಜಾನೆ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಹೀಗಾಗಿ ಭದ್ರತಾ ಪಡೆಗಳು ಗಸ್ತು ನಡೆಸುತ್ತಿವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಅವರು, ನಾಗರಿಕರ ಸೆರೆ ಹಾಗೂ ಸ್ಥಳದಲ್ಲಿನ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು. ‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಶಾಂಗ್ಕೈನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರ ಮೇಲೆ ತಾಂಗಖುಲ್ ನಾಗಾ ಸಮುದಾಯದವರು ಗುಂಡು ಹಾರಿಸಿದರು. ದಾಳಿಗೊಳಗಾದ ಇಬ್ಬರು ನಾಪತ್ತೆಯಾಗಿದ್ದಾರೆ. ಆದ್ದರಿಂದ ಅವರನ್ನು ಸೆರೆ ಹಿಡಿದೆವು’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.