ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗದೆ ಜೈಲಿಗೆ ವಾಪಸ್ ಆದ ಸಿಸೋಡಿಯಾ

Published 3 ಜೂನ್ 2023, 19:19 IST
Last Updated 3 ಜೂನ್ 2023, 19:19 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಿಹಾರ್ ಜೈಲಿನಿಂದ ಶನಿವಾರ ಮನೆಗೆ ಆಗಮಿಸಿದರಾದರೂ, ತಮ್ಮ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್‌ ಆಗಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.

ಸಿಸೋಡಿಯಾ ಪತ್ನಿ ಸೀಮಾ ಮೆದುಳು ಮತ್ತು ಬೆನ್ನು ಹುರಿಗೆ ಸಂಬಂಧಿಸಿದ ‘ಮಲ್ಟಿಪಲ್ ಸ್ಕ್ಲೆರೋಸಿಸ್’ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೀಗಾಗಿ, ಸಿಸೋಡಿಯಾ ಮನೆಗೆ ಬಂದಾಗ ಪತ್ನಿಯನ್ನು ಭೇಟಿ ಮಾಡಲು ಆಗಿಲ್ಲ.

'ಸಿಸೋಡಿಯಾ ಅವರು ಮಥುರಾ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಜೈಲಿನ ವಾಹನದಲ್ಲಿ ಬೆಳಗ್ಗೆ 9.38ಕ್ಕೆ ಆಗಮಿಸಿದ್ದರು. ಬಿಗಿ ಭದ್ರತೆಯಲ್ಲಿ ಅವರನ್ನು ಮನೆಯೊಳಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ, ಆರೋಗ್ಯ ಹದಗೆಟ್ಟ ಕಾರಣ ಸೀಮಾ ಅವರನ್ನು ಲೋಕ ನಾಯಕ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿತ್ತು. ಹೀಗಾಗಿ, ಸಿಸೋಡಿಯಾಗೆ ಪತ್ನಿ ಭೇಟಿ ಸಾಧ್ಯವಾಗಿಲ್ಲ' ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ದೆಹಲಿ ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಸಿಸೋಡಿಯಾ ಅವರು, ಪತ್ನಿಯನ್ನು ಭೇಟಿಯಾಗುವ ಸಲುವಾಗಿ ದೆಹಲಿ ಹೈಕೋರ್ಟ್‌ನಿಂದ ಶುಕ್ರವಾರ ಅನುಮತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT