ನವದೆಹಲಿ: ‘ಟಿಎಂಸಿ ಅಧ್ಯಾಯ ಮುಗಿದಿದೆ. ಐದು ಕೋಟಿ ನೀಡಲು ನಿರಾಕರಿಸಿದ್ದಕ್ಕಾಗಿ ಪಕ್ಷವು ಹೌರಾದ ಶಿಬ್ಪುರ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದೆ’ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ಮನೋಜ್ ತಿವಾರಿ ಮಂಗಳವಾರ ಗಂಭೀರವಾಗಿ ಆರೋಪಿಸಿದ್ದಾರೆ.

ರಾಷ್ಟ್ರೀಯ ತಂಡದಲ್ಲೂ ಆಡಿರುವ ಬಂಗಾಳ ಕ್ರಿಕೆಟಿಗ ತಿವಾರಿ, ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ರಾಜ್ಯ ಸಚಿವರಾಗಿದ್ದರು. ಸೋಮವಾರ ಪ್ರಕಟವಾದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಗೆಲುವು ಸಾಧಿಸುವುದರೊಂದಿಗೆ ಮಮತಾ ಅವರ 15 ವರ್ಷಗಳ ಆಡಳಿತ ಕೊನೆಗೊಂಡಿದೆ.

ಸಂದರ್ಶನದಲ್ಲಿ ಮಾತಾಡಿದ ತಿವಾರಿ, ‘ಈ ಸೋಲಿನ ಬಗ್ಗೆ ನನಗೆ ಅಚ್ಚರಿಯಿಲ್ಲ. ಇಡೀ ಪಕ್ಷವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾಗ ಇದು ನಡೆಯಲೇಬೇಕಿತ್ತು. ಭಾರೀ ಹಣ ನೀಡಿದವರಿಗೆ ಮಾತ್ರ ಟಿಕೆಟ್ ಸಿಕ್ಕಿದೆ. ಈ ಬಾರಿ ಕನಿಷ್ಠ 70ರಿಂದ 72 ಅಭ್ಯರ್ಥಿಗಳು ಟಿಕೆಟ್ಗಾಗಿ ತಲಾ ₹5 ಕೋಟಿ ಪಾವತಿಸಿದ್ದಾರೆ. ನನಗೂ ಹಣ ಕೇಳಲಾಗಿತ್ತು, ಆದರೆ ನಾನು ನಿರಾಕರಿಸಿದೆ. ಅಷ್ಟು ಹಣ ಕೊಟ್ಟು ಟಿಕೆಟ್ ಪಡೆದವರಲ್ಲಿ ಎಷ್ಟು ಜನ ಗೆದ್ದಿದ್ದಾರೆ ಎಂದು ನೀವೇ ಪರೀಕ್ಷಿಸಿ’ ಎಂದರು.

ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ ಎಂದು ಆರೋಪಿಸಿದ ಅವರು, ‘ಹೌರಾ ಜಿಲ್ಲೆಯ ಒಳಚರಂಡಿ ಸಮಸ್ಯೆಯ ಬಗ್ಗೆ ನಾನು ಎಷ್ಟು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಲಿಲ್ಲ. ಸಚಿವರ ಸಭೆಯಲ್ಲಿ ದೀದಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರೆ, ನಮಗೆ ನಿಮ್ಮ ಮಾತು ಕೇಳಲು ಸಮಯವಿಲ್ಲ ಎಂದು ಅರ್ಧಕ್ಕೇ ಸುಮ್ಮನಿರಿಸುತ್ತಿದ್ದರು. ನನ್ನ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಶಾಸಕರ ನಿಧಿಯಿಂದ ಮಾತ್ರವಲ್ಲದೆ, ನನ್ನ ಸ್ವಂತ ಹಣ ಖರ್ಚು ಮಾಡಿ ಪೂರೈಸಿದ್ದೇನೆ’ ಎಂದು ಆಕ್ರೋಶ ಹೊರ ಹಾಕಿದರು.

ಸಹೋದ್ಯೋಗಿ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ವಿರುದ್ಧವೂ ಕಿಡಿಕಾರಿದ ಅವರು, ‘ಬಿಸ್ವಾಸ್ ಅವರಿಗೆ ಕ್ರೀಡೆಯ ಬಗ್ಗೆ ಯಾವುದೇ ಜ್ಞಾನವಿಲ್ಲ. ಅಸುರಕ್ಷಿತ ಭಾವನೆಯಿಂದ ಅವರು ನನ್ನನ್ನು ಯಾವುದೇ ಕ್ರೀಡಾ ಕಾರ್ಯಕ್ರಮಗಳ ವೇದಿಕೆಗೆ ಆಹ್ವಾನಿಸುತ್ತಿರಲಿಲ್ಲ. ಕೊನೆಗೆ ಕೊಲ್ಕತ್ತದಲ್ಲಿ ನಡೆದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮವೂ ಹಳ್ಳ ಹಿಡಿಯಿತು. ಅಲ್ಲಿ ಜನರಿಗೆ ಮೋಸ ಮಾಡಲಾಗುತ್ತಿತ್ತು, ಅದಕ್ಕಾಗಿಯೇ ನಾನು ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.