ಭುವನೇಶ್ವರ (ಒಡಿಶಾ): ‘ಇಲ್ಲಿನ ಸರ್ಕಾರಿ ಸ್ವಾಮ್ಯದ ಎಸ್ಸಿಬಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ಬೆಂಕಿ ಅವಘಡ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.

ದುರಂತದ ಸಂದರ್ಭದಲ್ಲಿ ರೋಗಿಗಳನ್ನು ಕಾಪಾಡುವ ವೇಳೆ 11 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಕೂಡ ಸುಟ್ಟ ಗಾಯ ಗಳಾಗಿವೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಅವರು ಹೇಳಿದ್ದಾರೆ.

‘ಶಾರ್ಟ್ ಸರ್ಕೀಟ್ನಿಂದ ಬೆಂಕಿ ಅನಾಹುತ ಸಂಭವಿಸಿರುವ ಸಾಧ್ಯತೆ ಯಿದೆ’ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 2.30ರಿಂದ 3.30ರ ನಡುವೆ ಬೆಂಕಿ ಅನಾಹುತ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.

₹2 ಲಕ್ಷ ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸಲ್ಲಿಸಿದ್ದು, ಮೃತಪಟ್ಟವರ ಕುಟುಂಬದ ಹತ್ತಿರದ ಸದಸ್ಯರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ಎಫ್) ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.

‘ಒಡಿಶಾದ ಕಟಕ್ನ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಿಂದ ತೀವ್ರ ದುಃಖಿ ತನಾಗಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತಪಟ್ಟ ಕುಟುಂಬದ ಹತ್ತಿರದ ಸದಸ್ಯರಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು’ ಎಂದು ಪ್ರಧಾನಿ ಕಚೇರಿಯು ‘ಎಕ್ಸ್’ನಲ್ಲಿ ತಿಳಿಸಿದೆ.

ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಒಡಿಶಾ ಸರ್ಕಾರ ದಿಂದ ತಲಾ ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘೋಷಿಸಿದ್ದಾರೆ.

ನಂತರ ಮುಖ್ಯಮಂತ್ರಿಗೆ ಕರೆ ಮಾಡಿದ ಪ್ರಧಾನಿ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದುಕೊಂಡರು.

‘ದುರಂತದ ಕುರಿತು ಪ್ರಧಾನಿ ಅವರು ನನ್ನ ಜೊತೆಗೆ ದೂರವಾಣಿ ಕರೆ ಮಾಡಿ ವಿಸ್ತೃತವಾಗಿ ಮಾಹಿತಿ ಪಡೆದು ಕೊಂಡರು’ ಎಂದು ಮುಖ್ಯಮಂತ್ರಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

‘ದುರಂತದ ಬಳಿಕ ತುರ್ತು ಪರಿಹಾರ ಕೈಗೊಂಡ ರಾಜ್ಯ ಸರ್ಕಾರದ ಕ್ರಮಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಗಾಯಗೊಂಡವರಿಗೆ ವಿಶೇಷ ಚಿಕಿತ್ಸೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳು ದಾಖಲಾಗಿದ್ದ ಆಸ್ಪತ್ರೆಯ ಟ್ರಾಮಾಕೇರ್, ಐಸಿಯು ಹಾಗೂ ಅದಕ್ಕೆ ತಾಗಿಕೊಂಡಿದ್ದ ಐಸಿಯು ವಾರ್ಡ್ನಲ್ಲಿ 23 ಮಂದಿ ರೋಗಿಗಳಿದ್ದರು. ಬೆಂಕಿಯ ಕೆನ್ನಾಲಗೆಯಿಂದಾಗಿ 7 ಜನ ಮೃತಪಟ್ಟಿದ್ದು, ಉಳಿದ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ನ್ಯಾಯಾಂಗ ತನಿಖೆಗೆ ಆದೇಶ

ಪ್ರಕರಣದ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಮೋಹನ್ ಚರಣ್ ಮಾಝಿ, ಘಟನೆ ಕುರಿತು ತಕ್ಷಣವೇ ವರದಿ ನೀಡುವಂತೆ ಅಗ್ನಿಶಾಮಕ ಸೇವೆಯ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

‘ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುವಂತೆ ತಿಳಿಸಿದ್ದೇನೆ. ನ್ಯಾಯಾಂಗ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.

ಅಗ್ನಿ ಅವಘಡ ತಡೆಯಲು ₹720 ಕೋಟಿ: ‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಎದುರಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆಗೆ ಕಳೆದೆರಡು ವರ್ಷಗಳ ಬಜೆಟ್ನಲ್ಲಿ ₹720 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಸಂಭವಿಸಿದ ಪ್ರಮುಖ ಅಗ್ನಿ ದುರಂತಗಳು

*ಎಎಂಆರ್ಐ ಆಸ್ಪತ್ರೆ, ಕೋಲ್ಕತ್ತ–ಪಶ್ಚಿಮ ಬಂಗಾಳ (ಡಿ.9, 2011)– ಏಳು ಮಹಡಿಯ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ; ವಿಷಕಾರಿ ಹೊಗೆಯಿಂದ 90 ಮಂದಿ ಸಾವು

*ಡ್ರೀಮ್ಸ್ ಮಾಲ್ ಮುಂಬೈ–ಮಹಾರಾಷ್ಟ್ರ (ಮಾ–25–26 2021): ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ್ದ ಮಾಲ್ನಲ್ಲಿ ಬೆಂಕಿ ಅನಾಹುತ ಸಂಭವಿಸಿ 9 ಮಂದಿ ಸಾವು

*ವಿಜಯ್ ವಲ್ಲಭ್ ಆಸ್ಪತ್ರೆ, ವಿರಾರ್–ಮಹಾರಾಷ್ಟ್ರ (ಏ.23, 2021): ಆಸ್ಪತ್ರೆಯಲ್ಲಿ ಬೆಂಕಿ ಅನಾಹುತದಿಂದ 15 ಮಂದಿ ಕೋವಿಡ್ ರೋಗಿಗಳ ಸಾವು

*ಪಟೇಲ್ ವೆಲ್ಫೇರ್ ಆಸ್ಪತ್ರೆ ಭರೂಚ್–ಗುಜರಾತ್ (ಮೇ1, 2021): ಇಬ್ಬರು ಟ್ರೇನಿ ಶುಷ್ರೂಷಕಿಯರು ಸೇರಿ 16 ಕೋವಿಡ್ ಪೀಡಿತರು ಸಾವು

*ಮಹಾರಾಣಿ ಲಕ್ಷ್ಮೀ ಭಾಯಿ ವೈದ್ಯಕೀಯ ಕಾಲೇಜು, ಝಾನ್ಸಿ–ಉತ್ತರ ಪ್ರದೇಶ (ನ.15, 2024): ಶಾರ್ಟ್ ಸರ್ಕೀಟ್ನಿಂದ ನವಜಾತ ಶಿಶುಗಳ ತೀವ್ರ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿ 10 ಮಕ್ಕಳ ಸಾವು

*ಎಸ್ಎಂಎಸ್ ಆಸ್ಪತ್ರೆ ಜೈಪುರ, ರಾಜಸ್ಥಾನ (ಅ.6, 2025): ತುರ್ತು ನಿಗಾ ಘಟಕದಲ್ಲಿ ಅಗ್ನಿ ಅನಾಹುತ ಸಂಭವಿಸಿ ಆರು ಮಂದಿ ಸಾವು
.ಸಂಡೂರು: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ.ಕೊಣನೂರು | ತಂಬಾಕು ಬೆಲೆ ಕುಸಿತ: ಬೆಂಕಿ ಹಚ್ಚಿ ಬೆಳೆಗಾರರ ಆಕ್ರೋಶ .ನೋಯ್ಡಾದ ವಿದ್ಯುತ್ ಮೀಟರ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ: 26 ಮಂದಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.