ಶ್ರಾವಸ್ತಿ: ಉತ್ತರ ಪ್ರದೇಶ ಶ್ರಾವಸ್ತಿಯಲ್ಲಿ ವೇಗವಾಗಿ ಬಂದ ಎಸ್ಯುವಿ ಕಾರು ಆಟೊಗೆ ಹಿಂದೆಯಿಂದ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳು ಕಂದಕಕ್ಕೆ ಉರುಳಿವೆ. ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಹರಾಯಿಚ್–ಶ್ರಾವಸ್ತಿ ರಸ್ತೆಯ ಗಿಲೌಲ ಮತ್ತು ಇಕೌನಾ ನಡುವೆ ಇಂದು (ಶನಿವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಚೌರಾಸಿಯಾ ಹೇಳಿದ್ದಾರೆ.

ಬಹರಾಯಿಚ್ನಿಂದ ಇಕೌನಾ ಕಡೆಗೆ ತೆರಳುತ್ತಿದ್ದ ಆಟೊಗೆ ವೇಗವಾಗಿ ಬರುತ್ತಿದ್ದ ಎಸ್ಯುವಿ ಕಾರು ಹಿಂದೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೊ ಕಂದಕಕ್ಕೆ ಉರುಳಿದೆ. ನಿಯಂತ್ರಣ ಕಳೆದುಕೊಂಡ ಎಸ್ಯುವಿ ಕೂಡ ಅದೇ ಕಂದಕಕ್ಕೆ ಉರುಳಿದೆ ಎಂದು ಅವರು ತಿಳಿಸಿದ್ದಾರೆ.

ಆಟೊದಲ್ಲಿ ಚಾಲಕ ಸೇರಿ ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.