Maratha quota: Jarange ends fast after talks with govt delegation

ಜಲ್ನಾ: ಮಹಾರಾಷ್ಟ್ರದ ಸರ್ಕಾರಿ ನಿಯೋಗದ ಜೊತೆಗಿನ ಮಾತುಕತೆ ಬಳಿಕ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಜಲ್ನಾ ಜಿಲ್ಲೆಯ ತಮ್ಮ ಅಂತರವಾಲಿ ಸಾರತಿ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಜರಾಂಗೆ, ಮಧ್ಯರಾತ್ರಿಯ ನಂತರ ಉಪವಾಸ ಕೊನೆಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇದು ಅವರ ಒಂಬತ್ತನೇ ಉಪವಾಸ ಸತ್ಯಾಗ್ರಹವಾಗಿದೆ.

ಶನಿವಾರ ಸುಡುವ ಬಿಸಿಲನ್ನೂ ಲೆಕ್ಕಿಸದೇ ಜರಾಂಗೆ ಉಪವಾಸ ಕುಳಿತು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೇ ವೇಳೆ, ತಮ್ಮನ್ನು ಭೇಟಿಯಾದ ಸರ್ಕಾರಿ ನಿಯೋಗಕ್ಕೆ 12 ಅಂಶಗಳ ಪ್ರಸ್ತಾವನೆಯನ್ನು ನೀಡಿದ್ದಾರೆ.

ಸರ್ಕಾರಿ ತಂಡದ ನೇತೃತ್ವವನ್ನು ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಬಿಜೆಪಿ ಎಂಎಲ್ಸಿ ಪ್ರಸಾದ್ ಲಾಡ್ ವಹಿಸಿದ್ದರು.

ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜರಾಂಗೆ, ಈಗಾಗಲೇ ಗುರುತಿಸಲಾದ 58 ಲಕ್ಷ ಕುಂಬಿ ದಾಖಲೆಗಳ( ಹೈದರಾಬಾದ್ ನಿಜಾಮರ ಕಾಲವೂ ಸೇರಿದಂತೆ ಮಹಾರಾಷ್ಟ್ರದ ಐತಿಹಾಸಿಕ ಮತ್ತು ಸರ್ಕಾರಿ ದಾಖಲೆಗಳಾಗಿವೆ) ಆಧಾರದ ಮೇಲೆ ಪ್ರಮಾಣಪತ್ರಗಳನ್ನು ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದರು. ಈ ದಾಖಲೆಗಳನ್ನು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಪ್ರದರ್ಶಿಸಲಾಗುವುದು. ಆದರೆ, ಅನುಷ್ಠಾನದ ಜವಾಬ್ದಾರಿ ವಿಭಾಗೀಯ ಆಯುಕ್ತರ ಕಚೇರಿಯ ಮೇಲಿರುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಮರಾಠ-ಕುಂಬಿ ಸಮುದಾಯದವರಿಗೆ ಮೀಸಲಾತಿ ಪಡೆಯಲು ಕುಂಬಿ ಪ್ರಮಾಣಪತ್ರ ಅತ್ಯಗತ್ಯವಾಗಿದೆ.

ದಾಖಲೆಗಳಿದ್ದರೂ ಪ್ರಮಾಣಪತ್ರಗಳನ್ನು ನೀಡಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜರಾಂಗೆ ಒತ್ತಾಯಿಸಿದ್ದಾರೆ. ಈ ಕುರಿತಂತೆ ಅಧಿಕೃತ ಆದೇಶಗಳನ್ನು ಹೊರಡಿಸಲು ಮತ್ತು ಅವುಗಳನ್ನು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಮರಾಠ ಮೀಸಲಾತಿ ಚಳವಳಿಯ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದವರ ಕುಟುಂಬಗಳಿಗೆ 15 ದಿನಗಳಲ್ಲಿ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಜರಾಂಗೆ ತಿಳಿಸಿದ್ದಾರೆ.

ಜರಾಂಗೆ ಉಪವಾಸ ಅಂತ್ಯಗೊಳಿಸುವ ಮೊದಲು, ಸರ್ಕಾರಿ ವೈದ್ಯರು ಸ್ಥಳಕ್ಕೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.