'ನಾನು ನನ್ನ ಕಾರಿನಲ್ಲಿ ಎಸಿ ಬಳಸುವುದಿಲ್ಲ. ಎಸಿ ಇರುವ ಕಡೆಯಲ್ಲಿ ನಾನು ಕೂರುವುದೂ ಇಲ್ಲ. ಯಾಕೆಂದರೆ, ನಾನು ನನ್ನ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ಧಗೆಯೇ ಆಗುವುದಿಲ್ಲ' ಎಂದು ಕೇಂದ್ರ ಸಂವಹನ ಸಚಿವ ಜೋತಿರಾದಿತ್ಯ ಸಿಂಧಿಯಾ ಹೇಳಿಕೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಭಾನುವಾರ ಗುನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ, 'ಈರುಳ್ಳಿ ಇಟ್ಟುಕೊಂಡರೆ, 51 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ನಿಮಗೆ ಏನೂ ಆಗದು' ಎಂದಿದ್ದಾರೆ. ಮಾತ್ರವಲ್ಲ, ತಮ್ಮ ಜೇಬಿನಿಂದ ಈರುಳ್ಳಿ ತೆಗೆದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ.

'ನಾನು ನೋಡುವುದಕ್ಕೆ ಯುವಕನಂತೆ ಕಾಣಬಹುದು. ಆದರೆ, ನನ್ನ ನಂಬಿಕೆಗಳು ಹಳೇ ಕಾಲದ್ದು. ಇಂದು ಎಲ್ಲರೂ ತಮ್ಮ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುತ್ತಾರೆ. ಆದರೆ, ನಾನು ಈರುಳ್ಳಿ ಇಟ್ಟುಕೊಳ್ಳುತ್ತೇನೆ. ಆಯುರ್ವೇದ ಮುಂದುವರಿದಿರಬಹುದು. ಆದರೆ, ನಮ್ಮ ಹಳೇ ಕಾಲದ ಸಂಪ್ರದಾಯವನ್ನು ಮರೆಯಬಾರದು' ಎಂದಿದ್ದಾರೆ.

ಸದ್ಯ, ಕೇಂದ್ರ ಸಚಿವರ ಹೇಳಿಕೆಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾತ್ರಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಕೂಡ ಆಗುತ್ತಿದೆ. ಈ ಕುರಿತು ಪ್ರಜಾವಾಣಿ ಡಿಜಿಟಲ್ ಜೊತೆಗೆ ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆಯ ವೈದ್ಯರಾದ ಡಾ. ಬಸವರಾಜ್ ಎಸ್. ಕುಂಬಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯರು ಕೊಟ್ಟ ಸ್ಪಷ್ಟನೆ ಹೀಗಿದೆ

ಡಾ. ಬಸವರಾಜ್ ಪ್ರಕಾರ, ‘ಬಿಸಿಲ ಬೇಗೆಯಲ್ಲಿ ಈರುಳ್ಳಿ ಇಟ್ಟುಕೊಂಡು ತಿರುಗಾಡುವುದರಿಂದ ಧಗೆ ತಡೆಯಬಹುದು ಎಂಬುದು ಹಳೆಯ ಕಾಲದಿಂದ ಬಂದ ನಂಬಿಕೆಯಾಗಿದೆ. ಆದರೆ ವೈದ್ಯಕೀಯ ದೃಷ್ಟಿಕೋನದಲ್ಲಿ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಜೇಬಿನಲ್ಲಿ ಅಥವಾ ಚೀಲದಲ್ಲಿ ಈರುಳ್ಳಿ ಇಟ್ಟುಕೊಂಡರೆ, ಶರೀರದ ಉಷ್ಣಾಂಶ ನಿಯಂತ್ರಣ ಆಗುವುದಿಲ್ಲ ಮತ್ತು ಬಿಸಿಲು ಹೊಡೆತದಿಂದ ರಕ್ಷಣೆ ಸಿಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಈರುಳ್ಳಿಯನ್ನು ಬೇಸಿಗೆಯ ಅಡುಗೆಯಲ್ಲಿ ಮಾತ್ರ ಉಪಯೋಗಿಸಬೇಕು ಎಂಬ ಗೊಂದಲ ಕೂಡ ಕೆಲವರಲ್ಲಿದೆ. ಈರುಳ್ಳಿಯಲ್ಲಿ ಇರುವ ನಾರಿನಾಂಶ ಮತ್ತು ನೀರಿನ ಅಂಶದಿಂದಾಗಿ ಸೇವಿಸಿದಾಗ ಸ್ವಲ್ಪ ತಂಪಿನ ಅನುಭವ ನೀಡಬಹುದು. ಮಾತ್ರವಲ್ಲ, ಇದರಿಂದ ಪೌಷ್ಟಿಕಾಂಶ ಮತ್ತು ಜೀರ್ಣಕ್ರಿಯೆ ಸರಾಗವಾಗಿ ನಡೆಯಬಹುದು ಹೊರತು, ತೀವ್ರ ಬಿಸಿಲಿನಲ್ಲಿ ರಕ್ಷಣೆ ಸಿಗುವುದಿಲ್ಲ’ ಎಂದಿದ್ದಾರೆ.

‘ಬಿಸಿಲಿನಲ್ಲಿ ರಕ್ಷಿಸಿಕೊಳ್ಳಲು ಸರಿಯಾದ ಮಾರ್ಗಗಳೆಂದರೆ, ಸಾಕಷ್ಟು ನೀರು ಮತ್ತು ಎಲೆಕ್ಟ್ರೋಲೈಟ್ ಪಾನೀಯ ಕುಡಿಯುವುದು. ಮಧ್ಯಾಹ್ನದ ಹೊತ್ತು ನೇರ ಬಿಸಿಲಿಗೆ ಹೋಗದಿರುವುದು. ಗಾಳಿ ಬರುವಂತೆ ಸಡಿಲವಾದ ಬಟ್ಟೆ ಹಾಕುವುದು. ಹೊರಗೆ ಕೆಲಸ ಮಾಡುವವರು ಆಗಾಗ ನೆರಳಿನಲ್ಲಿ ಅಥವಾ ತಂಪಾದ ಜಾಗದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.