ಮಿರ್ಜಾಪುರ್: ಬ್ರೇಕ್ ಪೇಲಾದ ಟ್ರಕ್, ಹೆದ್ದಾರಿಯಲ್ಲಿ ಎರ್ರಾಬಿರ್ರಿ ಚಲಾಯಿಸಿದ್ದರಿಂದ ಭಾರಿ ಸರಣಿ ಅಪಘಾತವೊಂದು ಉತ್ತರ ಪ್ರದೇಶದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಅಪಘಾತದ ತೀವ್ರತೆಯಿಂದ ಸ್ಥಳದಲ್ಲಿಯೇ 11 ಜನ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಮಿರ್ಜಾಪುರ್–ರೆವಾ ರಾಷ್ಟ್ರೀಯ ಹೆದ್ದಾರಿ 135ರ ಧರ್ಮಾಗಂಜ್ನ ಬೈಸೋದಾ ಹಿಲ್ ಬಳಿ ರಾತ್ರಿ 9 ಗಂಟೆ ಸುಮಾರು ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಿರ್ಜಾಪುರ್ ಕಡೆಗೆ ಚಲಿಸುತ್ತಿದ್ದ ಟ್ರಕ್, ಬ್ರೇಕ್ ಪೇಲಾಗಿ ಮುಂದೆ ಹೊರಟಿದ್ದ ಬೊಲೆರೊ ಹಾಗೂ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್, ಆ ಎರಡೂ ಕಾರುಗಳೊಂದಿಗೆ ಇನ್ನೊಂದು ಟ್ರಕ್ಗೆ ಗುದ್ದಿದೆ. ಇದರಿಂದ ಅಕ್ಕಪಕ್ಕ ಬರುತ್ತಿದ್ದ ಇನ್ನೂ ಕೆಲವು ವಾಹನಗಳಿಗೆ ಹಾನಿಯಾಗಿದೆ.

ಭಾರಿ ವೇಗದಲ್ಲಿದ್ದ ಟ್ರಕ್ ಡಿಕ್ಕಿಯಾಗಿದ್ದರಿಂದ ಬೊಲೆರೊ ಕಾರಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡು ಮಕ್ಕಳು ಸೇರಿದಂತೆ ಏಳು ಜನ ಸಜೀವ ದಹನವಾಗಿದ್ದಾರೆ. ಜೊತೆಗೆ ಆಲ್ಟೊ ಕಾರಿನಲ್ಲಿದ್ದ 4 ಜನರೂ ಮೃತಪಟ್ಟಿದ್ದಾರೆ.

ಮೃತರ ಗುರುತು ಪತ್ತೆಯಾಗಿದೆ. ಗಾಯಾಳುಗಳನ್ನು ಮಿರ್ಜಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಅಪರ್ಣಾ ಕೌಶಿಕ್ ತಿಳಿಸಿದ್ದಾರೆ.

ಅಪಘಾತ ತೀವ್ರ ನಷ್ಟವನ್ನುಂಟು ಮಾಡಿದೆ. ಮೇಲ್ನೋಟಕ್ಕೆ ಬ್ರೇಕ್ ಪೇಲಾಗಿದ್ದರಿಂದಲೇ ದುರಂತ ಸಂಭವಿಸಿದೆ. ಈ ಕುರಿತು ವಿಸ್ತ್ರತ ತನಿಖೆ ಮಾಡುತ್ತೇವೆ ಎಂದೂ ಅವರು ಹೇಳಿದರು.

ಇನ್ನು, ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
.'ಮಿರ್ಜಾಪುರ್' ವೆಬ್ ಸಿರೀಸ್ ನಟ ಬ್ರಹ್ಮಸ್ವರೂಪ್ ಮಿಶ್ರಾ ಅನುಮಾನಾಸ್ಪದ ಸಾವು.ಶಿವಣ್ಣ ನಟಿಸುತ್ತಿರುವ ರಾಮ್ ಚರಣ್ 16ನೇ ಚಿತ್ರ 'ಪೆದ್ದಿ' .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.