ನವದೆಹಲಿ: ನಾರ್ವೆ ಪ್ರವಾಸದ ವೇಳೆ, ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಪತ್ರಕರ್ತೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಆದರೆ, ಮೋದಿ ಅವರು ಯಾವುದೇ ಪ್ರಶ್ನೆಗೆ ಉತ್ತರಿಸದೇ ಸಭಾಂಗಣದಿಂದ ನಿರ್ಗಮಿಸಿದ್ದಾರೆ. ಅವರ ಈ ನಡೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ರಾಜಧಾನಿ ಒಸ್ಲೊದಲ್ಲಿ ನಾರ್ವೆ ಪ್ರಧಾನಿ ಜೋನಸ್ ಗರ್ ಸ್ಟೋರ್ ಅವರೊಂದಿಗೆ ಮೋದಿ ಮಾತುಕತೆ ನಡೆಸಿದ ಬಳಿಕ, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ನಂತರ, ವೇದಿಕೆಯಿಂದ ಇಳಿಯುವ ವೇಳೆ, ಮೋದಿ ಅವರನ್ನು ಉದ್ದೇಶಿಸಿ ಪತ್ರಕರ್ತೆ ಹೆಲ್ ಲಿಂಗ್ ಅವರು, ‘ಪ್ರಧಾನಿ ಮೋದಿಯವರೇ, ವಿಶ್ವದ ಅತ್ಯಂತ ಮುಕ್ತ ಪತ್ರಿಕಾರಂಗ ನಮ್ಮದು. ನಾವು ಕೇಳುವ ಕೆಲ ಪ್ರಶ್ನೆಗಳಿಗೆ ಏಕೆ ನೀವು ಉತ್ತರಿಸುವುದಿಲ್ಲ’ ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ.

ಇದಾದ ಬಳಿಕ ಅವರು, ‘ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಅವರಿಂದ ನಾನು ಇಂತಹ ನಡೆ ನಿರೀಕ್ಷಿಸಿರಲಿಲ್ಲ. ನಮ್ಮ ಕೆಲಸವೇ ಅಧಿಕಾರಸ್ಥರನ್ನು ಪ್ರಶ್ನೆ ಮಾಡುವುದು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು ಮೋದಿಯವರಿಗೆ ಮನವಿ ಮಾಡುತ್ತಿದ್ದ ದೃಶ್ಯಗಳಿರುವ ವಿಡಿಯೊವನ್ನು ಕೂಡ ಲಿಂಗ್ ಹಂಚಿಕೊಂಡಿದ್ದಾರೆ.

‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕಕ್ಕೆ ಸಂಬಂಧಿಸಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ಈ ವಿಚಾರದಲ್ಲಿ ಭಾರತವು ಪ್ಯಾಲೆಸ್ಟೀನ್, ಯುಎಇ ಹಾಗೂ ಕ್ಯೂಬಾ ಜೊತೆ ಪೈಪೋಟಿ ಮಾಡುತ್ತಿದೆ’ ಎಂದೂ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಆಹ್ವಾನ: ಈ ಬೆಳವಣಿಗೆ ಬೆನ್ನಲ್ಲೇ, ಒಸ್ಲೊದಲ್ಲಿರುವ ಭಾರತದ ರಾಯಭಾರ ಕಚೇರಿಯು, ವಿದೇಶಾಂಗ ಸಚಿವಾಲಯ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ಲಿಂಗ್ ಅವರನ್ನು ಆಹ್ವಾನಿಸಿತ್ತು.

‘ವಿದೇಶದ ನಾಯಕರೊಂದಿಗೆ ಸಭೆ ನಡೆಸುವುದಕ್ಕೂ ಮೊದಲು ಅಥವಾ ಸಭೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ಸಾಮಾನ್ಯವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ’ ಎಂದು ಸಚಿವಾಲಯ ಹೇಳಿದೆ.

ಇತ್ತೀಚೆಗೆ, ನೆದರ್ಲೆಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಈ ಸಭೆ ಕುರಿತು ಮಾಹಿತಿ ನೀಡಲು ದಿ ಹೇಗ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ಸಿಬಿ ಜಾರ್ಜ್ ಅವರ ಬಳಿ ನೆದರ್ಲೆಂಡ್ಸ್ನ ಪತ್ರಕರ್ತರೊಬ್ಬರು ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು.

‘ಇಂತಹ ಸಭೆ ಬಳಿಕ, ಎರಡೂ ದೇಶಗಳ ಪ್ರಧಾನ ಮಂತ್ರಿಯವರು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಸಂಪ್ರದಾಯ ನೆದರ್ಲೆಂಡ್ಸ್ನಲ್ಲಿದೆ. ಆದರೆ, ಈ ದಿನ ಇಂತಹ ಸಂಪ್ರದಾಯದಂತೆ ಸುದ್ದಿಗೋಷ್ಠಿ ನಡೆಯಲಿಲ್ಲ. ಇದಕ್ಕೆ ಕಾರಣವೇನು’ ಎಂದು ಪತ್ರಕರ್ತ ಅಶ್ವಂತ್ ನಂದ್ರಮ್ ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.