ನವದೆಹಲಿ: ವಿವಿಧ ದೇಶಗಳಿಗೆ ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ರಾಷ್ಟ್ರಗಳ ಪ್ರಧಾನಿಯವರಿಗೆ, ಅಧ್ಯಕ್ಷರಿಗೆ ಹಾಗೂ ಗಣ್ಯರಿಗೆ ವೈವಿಧ್ಯಮಯ ಉಡುಗೊರೆಗಳನ್ನು ನೀಡಿದ್ದಾರೆ.

ವಿವಿಧ ಪ್ರದೇಶಗಳ ಮಹತ್ವ ಸಾರುವ ವಸ್ತುಗಳು,ಹಣ್ಣುಗಳು ಹಾಗೂ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ದೇಶದ ವೈವಿಧ್ಯಮಯ ಸಂಸ್ಕೃತಿ, ಪ್ರಾದೇಶಿಕ ವೈಶಿಷ್ಟ್ಯವನ್ನು ವಿಶ್ವ ನಾಯಕರ ಮುಂದೆ ತೆರೆದಿಟ್ಟಿದ್ದಾರೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಅಸ್ಸಾಂನ ಪ್ರಸಿದ್ಧ ಮೂಗಾ ರೇಷ್ಮೆ ಸ್ಟೋಲ್ ಅನ್ನು(ಮೇಲುಡುಪು) ಉಡುಗೊರೆಯಾಗಿ ನೀಡಿದ್ದಾರೆ. ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ಲಡಾಖ್ನ ಶುದ್ಧ ಉಣ್ಣೆಯಿಂದ ತಯಾರಿಸಿದ ಮೇಲುಡುಪನ್ನು ಮೋದಿ ಅವರು ಉಡುಗೊರೆಯಾಗಿ ನೀಡಿದ್ದಾರೆ.

ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರಿಗೆ ಕೇಸರ್ ಮಾವಿನ ಹಣ್ಣುಗಳು ಹಾಗೂ ಮೇಘಾಲಯದ ಪೈನಾಪಲ್, ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ಟ್ರುನ್ ಫ್ರೊಸ್ಟಾಡಾಟಿರ್ ಅವರಿಗೆ ಶೆರ್ಪಾ ತೇನ್ಸಿಂಗ್ ನೋರ್ಗೆ ಬಳಸುತ್ತಿದ್ದ ಕೊಡಲಿಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸನ್ ಅವರಿಗೆ ಬಿದ್ರಿ ಕಲೆಯಲ್ಲಿ ಅರಳಿದ ಹೂದಾನಿಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ರಹ್ಮಪುತ್ರ ಕಣಿವೆಯ ಪ್ರತಿಷ್ಠಿತ ಉಡುಪು ಎಂದೇ ಪರಿಗಣಿಸಲಾಗುವ ಮೂಗಾ ರೇಷ್ಮೆ ಸ್ಟೋಲ್ಅನ್ನು ಅಸ್ಸಾಂನ ‘ಬಂಗಾರದ ರೇಷ್ಮೆ’ ಎಂದೂ ಕರೆಯಲಾಗುತ್ತದೆ. ಬಂಗಾರದ ಬಣ್ಣ ಹಾಗೂ ವಿಶಿಷ್ಟ ಸೊಬಗಿನಿಂದಾಗಿ ಮೂಗಾ ರೇಷ್ಮೆ ಸ್ಟೋಲ್ ಬಹು ಜನಪ್ರಿಯ.

ಮೆಲೊನಿ ಅವರಿಗೆ ಮಣಿಪುರದ ಶಿರುಯಿ ಲಿಲಿ ರೇಷ್ಮೆ ಸ್ಟೋಲ್ ಅನ್ನು ಕೂಡ ಉಡುಗೊರೆಯಾಗಿ ನೀಡಲಾಗಿದೆ. ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿರುವ ಮಂಜು ಆಚ್ಛಾದಿತ ಶಿರುಯಿ ಕಶೊಂಗ್ ಶಿಖರವೇ ಈ ಸ್ಟೋಲ್ನ ನೇಯ್ಗೆಗೆ ಪ್ರೇರಣೆ. ಶಿರುಯಿ ಲಿಲಿ ಎಂಬುದು ಗಂಟೆಯಾಕಾರದ ಹೂವು. ತಿಳಿ ಗುಲಾಬಿ–ಶ್ವೇತ ವರ್ಣದ ಈ ಹೂವು ಕಶೊಂಗ್ ಪರ್ವತ ಶ್ರೇಣಿಯಲ್ಲಿ ಮಾತ್ರ ಕಾಣಸಿಗುತ್ತದೆ.

ಇಟಲಿ ಅಧ್ಯಕ್ಷ ಸರ್ಗಿಯೊ ಮಟ್ಟರೆಲ್ಲಾ ಅವರಿಗೆ ಹಿಂದೂಸ್ಥಾನಿ ಗಾಯಕ ಪಂಡಿತ ಭೀಮಸೇನ ಜೋಶಿ, ಕರ್ನಾಟಕ ಸಂಗೀತ ಕಲಾವಿದೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಗಾಯನದ ಸಿ.ಡಿ.ಗಳನ್ನು ಒಳಗೊಂಡ ಅಮೃತಶಿಲೆಯ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಲಾಗಿದೆ.

ನೆದರ್ಲೆಂಡ್ಸ್ ರಾಜ ವಿಲ್ಲೆಮ್ ಅಲೆಕ್ಸಾಂಡರ್ ಅವರಿಗೆ ಜೈಪುರದ ಕುಶಲಕರ್ಮಿಗಳ ಕೈಚಳಕದಲ್ಲಿ ಮೂಡಿದ ಮಡಕೆಯನ್ನು, ರಾಣಿ ಮ್ಯಾಕ್ಸಿಮಾ ಅವರಿಗೆ ರಾಜಸ್ಥಾನದ ಮೀನಕಾರಿ ಮತ್ತು ಕುಂದನ್ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಧಾನಿ ರಾಬ್ ಜೆಟ್ಟೆನ್ ಅವರಿಗೆ ಮಧುಬನಿ ಶೈಲಿಯ ಕಲಾಕೃತಿಯನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ.

ನಾರ್ವೆ ಪ್ರಧಾನಿ ಜೋನಸ್ ಗರ್ ಸ್ಟೋರ್ ಅವರಿಗೆ ಸಿಕ್ಕಿಂನ ಆರ್ಕಿಡ್ ಚಿತ್ರವನ್ನು ಒಳಗೊಂಡ ‘ಪೇಪರ್ವೇಯ್ಟ್’, ರಾಜ 5ನೇ ಹೆರಾಲ್ಡ್ ಅವರಿಗೆ ಸುಂದರವಾದ ನಾವೆಯೊಂದರ ಮಾದರಿಯನ್ನು ನೀಡಲಾಗಿದೆ. ಇದು ಒಡಿಶಾದ ಕಟಕ್ನಲ್ಲಿ ತಯಾರಿಸಲಾಗುತ್ತಿದೆ. ರಾಣಿ ಸೊಂಜಾ ಅವರಿಗೆ ಪಟ್ಟಚಿತ್ರವನ್ನು ನೀಡಲಾಗಿದೆ. ಇದನ್ನು ಕೂಡ ಒಡಿಶಾದಲ್ಲಿ ತಯಾರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.